Advertisement

Asia Cup 2023: ಕಾಮೆಂಟರಿ ಪ್ಯಾನೆಲ್ ನಲ್ಲಿ ರವಿ ಶಾಸ್ತ್ರಿ, ವಾಸಿಂ ಅಕ್ರಮ್

12:27 PM Aug 14, 2023 | Team Udayavani |

ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಏಷ್ಯಾಕಪ್ ಕ್ರಿಕೆಟ್ ಕೂಟ ಆರಂಭವಾಗಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಈ ಬಾರಿಯ ಏಷ್ಯಾಕಪ್ ನಡೆಯಲಿದೆ. ಒಟ್ಟು ಆರು ತಂಡಗಳು ಭಾಗವಹಿಸುವ ಕೂಟ ಈ ಬಾರಿ ಏಕದಿನ ಮಾದರಿಯಲ್ಲಿ ನಡೆಯಲಿದೆ.

Advertisement

ಆಗಸ್ಟ್ 30ರಂದು ಆರಂಭವಾಗಲಿರುವ ಕೂಟದಲ್ಲಿ 13 ಪಂದ್ಯಗಳು ನಡೆಯಲಿದೆ. ಪಾಕಿಸ್ತಾನದ ಎರಡು ಮೈದಾನ ಮತ್ತು ಶ್ರೀಲಂಕಾದ ಎರಡು ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ.

ಏಷ್ಯಾಕಪ್ ಕೂಟಕ್ಕೆ ವೀಕ್ಷಕ ವಿವರಣೆಗಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾರತದ ಐವರು ಇದರಲ್ಲಿ ಸ್ಥಾನ ಪಡೆದಿದ್ದಾರೆ. ಅವರೆಂದರೆ ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಗೌತಮ್ ಗಂಭೀರ್, ಇರ್ಫಾನ್ ಪಠಾಣ್ ಮತ್ತು ದೀಪ್ ದಾಸ್ ಗುಪ್ತಾ.

ಪಾಕಿಸ್ತಾನದ ವಾಸಿಂ ಅಕ್ರಮ್, ವಾಖರ್ ಯೂನಿಸ್, ರಮೀಜ್ ರಾಜಾ ಮತ್ತು ಬಾಜಿದ್ ಖಾನ್ ಕಾಮೆಂಟರಿ ಪ್ಯಾನಲ್ ನಲ್ಲಿ ಇರಲಿದ್ದಾರೆ. ಬಾಂಗ್ಲಾದೇಶದ ಅಥರ್ ಅಲಿ ಖಾನ್, ಶ್ರೀಲಂಕಾದ ರಸ್ಸೆಲ್ ಅರ್ನಾಲ್ಡ್ ಮತ್ತು ನ್ಯೂಜಿಲೆಂಡ್‌ ನ ಸ್ಕಾಟ್ ಸ್ಟೈರಿಸ್ ಕೂಡಾ 12 ಸದಸ್ಯರ ಪಟ್ಟಿಯಲ್ಲಿದ್ದಾರೆ, ಇದು 2022 ಕೂಟದಲ್ಲಿ ಕೂಡಾ ಬಹುತೇಕ ಇವರೇ ಇದ್ದರೂ, ರಾಜಾ ಮತ್ತು ಬಾಜಿದ್ ಮಾತ್ರ ಹೊಸ ಸೇರ್ಪಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next