Advertisement

ಕಾಫಿನಾಡಿಗೆ ಸಿಎಂ ಕೊಡುಗೆ ಏನು?

05:58 PM Dec 25, 2020 | Suhan S |

ಚಿಕ್ಕಮಗಳೂರು: ಸಿ.ಎಂ. ಯಡಿಯೂರಪ್ಪ ಅವರು ಹಿಂದೆ ಜಿಲ್ಲೆಗೆಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲೆಯಅಭಿವೃದ್ಧಿ ದೃಷ್ಟಿಯಿಂದ ಕಡೂರುಮತ್ತು ಚಿಕ್ಕಮಗಳೂರು ಕ್ಷೇತ್ರವನ್ನು ದತ್ತು ಪಡೆಯುತ್ತೇನೆಂದು ಹೇಳಿದ್ದರು. ಎರಡೂ ಕ್ಷೇತ್ರಗಳಲ್ಲಿ ಮಾಡಿರುವಅಭಿವೃದ್ಧಿ ಕೆಲಸಗಳಾದರೂ ಏನೆಂದುಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್‌ ಮಾಧ್ಯಮ ವಿಶ್ಲೇಷಕ ರವೀಶ್‌ ಕ್ಯಾತನಬೀಡು ಆಗ್ರಹಿಸಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 2008ರ ವಿಧಾನಸಭೆಚುನಾವಣೆಯಲ್ಲಿ ಯಡಿಯೂರಪ್ಪ ಅವರು ನಿಡಘಟ್ಟದ ಗಾಂ ಗುಡಿಯಮುಂದೇ ಚಿಕ್ಕಮಗಳೂರು ಕ್ಷೇತ್ರವನ್ನು  ದತ್ತು ಪಡೆಯುತ್ತೇನೆ ಎಂದಿದ್ದರು.2010ರ ಉಪ ಚುನಾವಣೆಯಲ್ಲಿಕಡೂರು ಕ್ಷೇತ್ರವನ್ನು ದತ್ತು ಪಡೆಯುತ್ತೇನೆಮತ್ತು ಈ ಭಾಗದ ಕೆರೆಗಳಿಗೆ ನೀರುಹರಿಸುತ್ತೇನೆ ಎಂದು ಬಹಿರಂಗ ಘೋಷಣೆಮಾಡಿದ್ದರು. ಘೋಷಣೆ ಮಾಡಿ 10ವರ್ಷ ಕಳೆದಿದೆ. ಕೆರೆಗಳಿಗೆ ನೀರುಹರಿಸಿಲ್ಲ. ಕಡೂರು, ಚಿಕ್ಕಮಗಳೂರು ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ, ಈ ಬಗ್ಗೆಶುಕ್ರವಾರ ನಗರಕ್ಕೆ ಭೇಟಿ ನೀಡುವ ಸಿ.ಎಂ. ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಬೇಕು ಎಂದರು.

ಮೆಡಿಕಲ್‌ ಕಾಲೇಜು ಕಟ್ಟಡದ ನಕಾಶೆ ಮೊದಲಿನಂತಿಲ್ಲ. ಆದರೂ ಶಂಕುಸ್ಥಾಪನೆ ನೆರವೇರುತ್ತಿದೆ. ಗ್ರಾಪಂ ಚುನಾವಣೆನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿರುವುದುನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಸಂಬಂಧ ಚುನಾವಣಾ ಆಯೋಗ ಕಾರ್ಯಕ್ರಮ ಆಯೋಜಕರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ  ಕಡೂರು-ಚಿಕ್ಕ ಮಗಳೂರು ಕ್ಷೇತ್ರ ದತ್ತು ಸ್ವೀಕಾರ ಭರವಸೆ ಏನಾಯ್ತು?: ರವೀಶ್‌ ಕ್ಯಾತನಬೀಡು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೋವಿಡ್ ಸೋಂಕು ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ವಿಧಿಸಿದೆ. ಸಮಾರಂಭದಲ್ಲಿ ಸಾವಿರಾರು ಜನರನ್ನು ಒಗ್ಗೂಡಿಸುವ ಮೂಲಕ ಅವರೇಮಾಡಿದ ಕಾನೂನು ಅವರೇ ಉಲ್ಲಂಘನೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಒಂದು ನೀತಿ ಸಾರ್ವಜನಿಕರಿಗೆ ಒಂದು ನೀತಿಯೇಎಂದು ಪ್ರಶ್ನಿಸಿದರು.

ಕೆಂಗೇಗೌಡ ಮಾತನಾಡಿ, ಕರಗಡನೀರಾವರಿ ಯೋಜನೆ ಪ್ಲ್ಯಾನಿಂಗ್‌ ಬದಲಾಯಿಸಲು ಮುಂದಾಗಿದ್ದಾರೆ. ಈಸಂಬಂಧ ಶಾಸಕ ಸಿ.ಟಿ. ರವಿ ಅವರೇ ಹೇಳಿಕೆ ನೀಡಿದ್ದಾರೆ. ಪ್ಲ್ಯಾನಿಂಗ್‌ ಚೇಂಜ್‌ ಮಾಡಿದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಸದ್ಯ ಚಾಲ್ತಿ  ಯಲ್ಲಿರುವ ಪ್ಲ್ಯಾನಿಂಗ್‌ನಂತೆ ಕಾಮಗಾರಿ ಪೂರ್ಣಗೊಳಿಸಲಿ ಎಂದು ಒತ್ತಾಯಿಸಿದರು. ನಟರಾಜ್‌ ಮಾತನಾಡಿ, ಗೋಂದಿ ಯಿಂದ 1.4 ಟಿಎಂಸಿ ನೀರುಹರಿಸಿ 18 ತಿಂಗಳಲ್ಲಿ ಬಯಲುಸೀಮೆಭಾಗದ ಕೆರೆಗಳನ್ನು ತುಂಬಿಸುವುದಾಗಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವಸಿ.ಟಿ. ರವಿ ಅವರು ಹೇಳಿದ್ದಾರೆ. ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ. ಆದರೆ, ಅನುಮೋದನೆ ದೊರೆತು ಎರಡು ತಿಂಗಳು ಕಳೆದಿದೆ. ಇನ್ನೂ ಕಾಮಗಾರಿಶಂಕುಸ್ಥಾಪನೆಯೇ ಆಗಿಲ್ಲ, ಕಾಮಗಾರಿ 18 ತಿಂಗಳಲ್ಲಿ ಮುಗಿಯುವುದು ಅಸಾಧ್ಯವೆಂಬಅನುಮಾನ ಕಾಡುತ್ತಿದೆ ಎಂದರು.

Advertisement

ಕಾಂಗ್ರೆಸ್‌ ಕಾರ್ಮಿಕ ವಿಭಾಗದಜಿಲ್ಲಾಧ್ಯಕ್ಷ ರಸೂಲ್‌ಖಾನ್‌ ಮಾತನಾಡಿ,ನಗರದ ಯುಜಿಡಿ, ವಾಜಪೇಯಿ ಬಡಾವಣೆ, ಅಮೃತ್‌ ಯೋಜನೆಯಲ್ಲಿದೊಡ್ಡ ಪ್ರಮಾಣದ ಅಕ್ರಮ ನಡೆಸಿದ್ದು,ಸಿ.ಎಂ. ಕರೆಸಿ ಉದ್ಘಾಟಿಸುವ ಮೂಲಕ ಅಕ್ರಮ ಮುಚ್ಚಿಹಾಕುವ ಪ್ರಯತ್ನ ಇದಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಸಿ.ಸಿ. ಸಂತೋಷ್‌ ಕುಮಾರ್‌ ಇದ್ದರು.

ಅತಿವೃಷ್ಟಿಯಿಂದ ಭೂಮಿ, ಮನೆ ಕಳೆದುಕೊಂಡವರಿಗೆ ಪರ್ಯಾಯ ಭೂಮಿ, ಮನೆ ನೀಡಿಲ್ಲ, ಕರಗಡ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಅಪೂರ್ಣಗೊಂಡ ಅಮೃತ್‌ ಯೋಜನೆ ಪೂರ್ಣಗೊಂಡಿದೆ ಎಂದು ಅಧಿ ಕಾರಿಗಳು ಸಿ.ಎಂ. ಅವರಿಗೆ ಸುಳ್ಳು ಹೇಳಿ ಉದ್ಘಾಟನೆ ಮಾಡಿಸುತ್ತಿದ್ದಾರೆ.-ರವೀಶ್‌ ಕ್ಯಾತನಬೀಡು, ಕಾಂಗ್ರೆಸ್‌ ಮಾಧ್ಯಮ ವಿಶ್ಲೇಷಕ

Advertisement

Udayavani is now on Telegram. Click here to join our channel and stay updated with the latest news.

Next