Advertisement

Ravana, ಕಂಸನಿಂದಲೇ ಧರ್ಮ ಅಳಿಸಲು ಆಗಲಿಲ್ಲ, ಇನ್ನು ಸ್ಟಾಲಿನ್…: ಯೋಗಿ ಆದಿತ್ಯನಾಥ್

12:24 PM Sep 08, 2023 | Team Udayavani |

ಉತ್ತರ ಪ್ರದೇಶ: ದೇಶದಲ್ಲಿ ಸನಾತನ ಧರ್ಮದ ಚರ್ಚೆ ಇನ್ನೂ ನಿಂತಿಲ್ಲ. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉದಯನಿಧಿ ಸ್ಟ್ಯಾಲಿನ್‌ ವಿರುದ್ಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಆದಿ ಕಾಲದಿಂದಲೂ ಸಾಧ್ಯವಾಗದೇ ಇರೋದನ್ನ ಇವರು ಯಾರೋ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆ ಸಂಬಂಧ ಕಿಡಿಕಾರಿದ ಯೋಗಿ ‘ರಾವಣನ ದುರಹಂಕಾರ ಸನಾತನ ಧರ್ಮವನ್ನು ಅಳಿಸಲಾಗಲಿಲ್ಲ. ಕಂಸನ ಘರ್ಜನೆ ಧರ್ಮವನ್ನು ಅಲುಗಾಡಿಸಲಾಗಲಿಲ್ಲ. ಅಷ್ಟು ಮಾತ್ರವಲ್ಲದೆ ಬಾಬರ್‌ ಮತ್ತು ಔರಂಗಜೇಬನ ದೌರ್ಜನ್ಯಗಳಿಂದಲೂ ಸನಾತನ ಧರ್ಮವನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಈ ನಗಣ್ಯ ವ್ಯಕ್ತಿಗಳು ಸನಾತನ ಧರ್ಮವನ್ನು ಹೇಗೆ ನಾಶ ಮಾಡಬಲ್ಲರು? ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಇಡೀ ದೇಶವೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸರ್ಕಾರವನ್ನು ಟೀಕಿಸಲು ಅವರಿಗೆ ಬೇರೆ ಯಾವ ವಿಚಾರಗಳೂ ಸಿಗುತ್ತಿಲ್ಲ. ಅದಕ್ಕಾಗಿ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ದೇಶ ಅಭಿವೃದ್ಧಿ ಆಗುತ್ತಿದ್ದರೆ, ಕೆಲವರಿಗೆ ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಒಂದು ಮಾತಿದೆ ಸೂರ್ಯನನ್ನು ನೋಡಿ ಉಗುಳಿದರೆ ಎಂಜಲು ಬೀಳುವುದು ಉಗುಳಿದವನ ಮುಖಕ್ಕೆ ಎಂಬುದು ಆತನಿಗೆ ತಿಳಿದಿಲ್ಲ, ರಾವಣ, ಹಿರಣ್ಯಕಶ್ಯಪ ಮತ್ತು ಕಂಸನಂಥವರು ದೈವಿಕ ಶಕ್ತಿಗೆ ಸವಾಲು ಹಾಕಿದ್ದರು. ಕೊನೆಗೆ ಅವರು ಎಲ್ಲವನ್ನೂ ಕಳೆದುಕೊಂಡರು. ಅವರ ಪಾಲಿಗೆ ಏನೂ ಉಳಿಯಲಿಲ್ಲ. ಆದರೆ, ಸನಾತನ ಧರ್ಮದ ದೇವರು ಉಳಿದುಕೊಂಡಿದ್ದಾನೆ ಮತ್ತು ಈಗಲೂ ಇದ್ದಾನೆ.ಸನಾತನ ಧರ್ಮವು ಸತ್ಯವಾಗಿದೆ ಮತ್ತು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದರು.

Advertisement

ಉತ್ತರ ಪ್ರದೇಶ ಉತ್ತಮ ರಾಜ್ಯಗಳಲ್ಲಿ ಒಂದಾಗಿದೆ ಎಂದು ಯೋಗಿ ಹೇಳಿದರು. ಇದು ದೇವರ ಕೃಪೆ. ಸನಾತನ ಧರ್ಮ ಎದ್ದು ನಿಂತಾಗ ಅಯೋಧ್ಯೆ ಮತ್ತು ಕಾಶಿಯಲ್ಲಿ ರಾಮಮಂದಿರ ಏಳುತ್ತದೆ ಮತ್ತು ಈ ನಗರಗಳು ಬೆಳೆಯುತ್ತಲೇ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: G20 ಔತಣಕೂಟದಲ್ಲಿ ಭಾಗವಹಿಸುವುದಿಲ್ಲ…: ಎಚ್ ಡಿ ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next