Advertisement

ಉದ್ಯಮಿ ರತುಲ್‌ ಪುರಿ ಬಂಗಲೆ ಜಪ್ತಿ

11:20 PM Aug 11, 2019 | Sriram |

ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ ಲ್ಯಾಂಡ್‌ ವಿವಿಐಪಿ ಕಾಪ್ಟರ್‌ ಹಗರಣದ ಆರೋಪಿಯಾಗಿ ರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸಂಬಂಧಿ, ಉದ್ಯಮಿ ರತುಲ್‌ ಪುರಿ ಹಾಗೂ ಅವರ ತಂದೆ ದೀಪಕ್‌ ಪುರಿ ಅವರಿಗೆ ಸೇರಿದ್ದೆನ್ನಲಾದ 300 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರವಿವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Advertisement

ದಿಲ್ಲಿಯ ಪ್ರತಿಷ್ಠಿತ ಬಡಾವಣೆಯಲ್ಲಿನ ಅತ್ಯಾಧುನಿಕ ಬಂಗಲೆ ಹಾಗೂ 2.84 ಲಕ್ಷ ಕೋಟಿ ರೂ.ಗಳ ವಿದೇಶಿ ಬಂಡವಾಳ ಹೂಡಿಕೆಯ ದಾಖಲೆಗಳನ್ನು ಕೂಡ ಜಪ್ತಿ ಮಾಡಲಾಗಿದೆ. ದಿಲ್ಲಿಯಲ್ಲಿ ಪ್ರಭಾವಿಗಳ ನೆಲೆಯೇ ಆಗಿರುವ ಲ್ಯೂಟೆನ್ಸ್‌ ಪ್ರಾಂತ್ಯದ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿನ 27ಎ ಸಂಖ್ಯೆಯ ಬಂಗಲೆಯನ್ನು ಇಲಾಖೆ ವಶಕ್ಕೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next