Advertisement

ರತ್ನಪುರಿ ವೀರಾಂಜನೇಯ ಉತ್ಸವ

07:30 AM Feb 25, 2019 | Team Udayavani |

ಹುಣಸೂರು: ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆಯುವ ತಾಲೂಕಿನ ರತ್ನಪುರಿಯ ಜಾತ್ರೆಯ ಮೊದಲ ದಿನ ವೀರಾಂಜನೇಯ ಸ್ವಾಮಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

Advertisement

ರತ್ನಪುರಿ ಜಾತ್ರಾಮಾಳದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಿಂದ ಟ್ರ್ಯಾಕ್ಟರ್‌ನಲ್ಲಿ ಕಂಚಿನ ಉತ್ಸವ ಮೂರ್ತಿಯನ್ನು ಹೂವು-ಜಗಮಗಿಸುವ ದೀಪಗಳಿಂದ ಅಲಂಕೃತಗೊಳಿಸಿದ್ದ  ಮಂಟಪದಲ್ಲಿರಿಸಿ, ಮಂಗಳವಾದ್ಯದೊಂದಿಗೆ ಹುಣಸೂರು ರಸ್ತೆಯ ಎಪಿಎಂಸಿ ಎದುರಿನ ಅಶ್ವತ್ಥ ಕಟ್ಟೆವರೆಗೆ ಮೆರವಣಿಗೆ ನಡೆಸಿ, ಮತ್ತೆ ತಡರಾತ್ರಿ ದೇವಸ್ಥಾನಕ್ಕಾಗಮಿಸಿತು.

ಈ ಬಾರಿ ವಿಶೇಷವಾಗಿ ಕೇರಳದ ಚಂಡೆ ಮೇಳದವರನ್ನು ಕರೆಸಲಾಗಿತ್ತು. ಚಂಡೆ ಹಾಗೂ ತಮಟೆ ಸದ್ದಿಗೆ ಯುವಪಡೆ ಕುಣಿದು ಕುಪ್ಪಳಿಸಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಆಂಜನೇಯಸ್ವಾಮಿಗೆ ಈಡುಗಾಯಿ ಒಡೆದು, ದೇವರ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕರ್ಪೂರ ಹಚ್ಚಿ, ವಿಶೇಷ ಪೂಜೆ ಸಲ್ಲಿಸಿ ಧನ್ಯತಾಭಾವ ಮೆರೆದರು.

ಜಾತ್ರೆ ಪ್ರಯುಕತ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಊಟ ಸೇವಿಸಿದರು. ಉತ್ಸವದಲ್ಲಿ ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ಜಿಪಂ ಸದಸ್ಯ ಎಂ.ಬಿ.ಸುರೇಂದ್ರ, ಜಾತ್ರೆ ಸಮಿತಿ ಅಧ್ಯಕ್ಷ ಪ್ರಭಾಕರ್‌, ದೀಪು ಇತರರದ್ದರು.

Advertisement

Udayavani is now on Telegram. Click here to join our channel and stay updated with the latest news.

Next