Advertisement
Related Articles
Advertisement
ಇಂದಿನ ಯುವ ಜನಾಂಗ ಈ ಚರಿತ್ರೆಯ ಅರಿವಿಲ್ಲದೆ ಅಳಿದುಳಿದ ಸ್ಮಾರಕಗಳ ಮೇಲೆ ತಮ್ಮ ಪ್ರೇಯಸಿ, ಪ್ರಿಯತಮರ ಹೆಸರನ್ನು ಕೆತ್ತಿ, ಗಾರೆಯನ್ನೆಲ್ಲ ಹಾಳು ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಇದರ ಮಹತ್ವವನ್ನು ತಿಳಿಸುವುದು ಮತ್ತು ಈ ಸ್ಮಾರಕಗಳನ್ನು ಉಳಿಸುವುದು ನಮ್ಮ ತತ್‌ಕ್ಷಣದ ಕರ್ತವ್ಯವಾಗಿದೆ. ರತ್ನಗಿರಿಗೆ ತಲುಪಲು ಮೂರು ದಾರಿಗಳಿವೆ. ತುಮಕೂರು ಮಾರ್ಗವಾಗಿ ಶಿರಾ,ಅಗಳಿ,ರತ್ನಗಿರಿ.ಇದಲ್ಲದೆ ದಾಬಸ್‌ಪೇಟೆ, ಮಧುಗಿರಿ, ಹೊಸಳ್ಳಿ, ಮಾರ್ಗವಾಗಿ ಕೂಡ ಹೋಗಬಹುದು. ಮೂರನೇ ದಾರಿ, ತುಮಕೂರು, ದೊಡ್ಡಾಲದಮರ ಗೇಟ್, ಬಡವನಹಳ್ಳಿ, ರಂಟವಾಳ ಮಾರ್ಗವಾಗಿ ಕೂಡ ಹೋಗಬಹುದು. ರಸ್ತೆ ಉತ್ತಮವಾಗಿದೆ. ಬೇಸಿಗೆಯಲ್ಲಿ ಬಿಸಿಲು ಝಳ ಜಾಸ್ತಿ ಇರುವುದರಿಂದ ಬಿಸಿಲೇರುವ ಮುನ್ನ ಬೆಟ್ಟ ಹತ್ತುವುದು ಒಳ್ಳೆಯದು. ಪ್ರತಿಯೊಬ್ಬರಿಗೂ ತಲಾ 2 ಲೀಟರ್ ನೀರು ತೆಗೆದುಕೊಂಡು ಹೋಗಲು ಮರೆಯಬೇಡಿ. ಗುಡಿಬಂಡೆ ನಾಗರಿಕರಿಗೆ ತಮ್ಮ ಊರಿನಲ್ಲಿರುವ ಕೋಟೆಯ ಮಹತ್ವದ ಅರಿವಿದೆ. ಅದನ್ನು ಶುಚಿಯಾಗಿ ಇಟ್ಟಕೊಳ್ಳಬೇಕೆಂಬ ಕಾಳಜಿ ಇದೆ. ಚಾರಣಕ್ಕೆ ಬಂದವರು ರಾತ್ರಿ ವೇಳೆಯಲ್ಲಿ ಮೇಲೆ ತಂಗಲೂ ಬಿಡುವುದಿಲ್ಲ. ಸ್ಥಳಿಯರ ಕಣ್ಗಾವಲಿನಿಂದಾಗಿ ಇಲ್ಲಿ ಯಾವುದೇ ಅನೈತಿಕ ಚಟುವಟಿಗಳಿಗೆ ಅವಕಾಶವಿಲ್ಲ. ಬಂಡೆಯ ಮೇಲೊಂದು ಕೋಟೆ
ಗುಡಿಬಂಡೆಯಲ್ಲಿ ಚಾರಿತ್ರಿಕ ಹಿನ್ನೆಲೆಯ ಒಂದು ಕೋಟೆ ಇದೆ. ಅದೇ ಊರಿನಲ್ಲಿ, ಸುಪ್ರಸಿದ್ಧ ತಿರುಮಲ ವೆಂಕಟರಮಣನ ದೇವಾಲಯವೂ ಇದೆ. ಚರಿತ್ರೆ ಮತ್ತು ಭಕ್ತಿ ಭಾವದ ಕಥೆ ಹೇಳುವ ಈ ಸ್ಥಳ ನೋಡಬೇಕೆಂದರೆ, ಚಿಕ್ಕಬಳ್ಳಾಪುರ ದಾಟಿ , ಬಾಗೇಪಲ್ಲಿಗೂ ಮೊದಲು ಪೆರೇಸಂದ್ರದ ಹತ್ತಿರ ಎಡಕ್ಕೆ ಹೋಗಬೇಕು. ಆದಾರಿಯುದ್ದಕ್ಕೂ ಹಸಿರಿನಿಂದ ಕಂಗೊಳಿಸುವ ಹೊಲಗಳು. ಹೊಲದ ತುಂಬ ಬಣ್ಣ ಬಣ್ಣದ ಹೂವುಗಳು. ಈ ಹೊಲಗಳ ಮಧ್ಯೆ ಅಂಕುಡೋಕಾದ ಕರಿಕಾಳಿಂಗನಂತೆ ಮಲಗಿರುವ ರಸ್ತೆ ಸಿಗುತ್ತದೆ. ಹಾಗೇ ಸಾಗಿದರೆ ಗುಡಿಬಂಡೆ ಊರು ಎದುರಾಗುತ್ತದೆ. ಬಸ್ಟಾಂಡಿನಿಂದ ಮುಂದೆ ಹೋದರೆ ಒಂದು ಚಿಕ್ಕಸರ್ಕಲ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿದರೆ ನೇರ ಬೆಟ್ಟದ ಮೇಲಕ್ಕೆ ಹೋಗಲು ಕಾಲುದಾರಿ ಸಿಗುತ್ತದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಕೋಟೆ ದೂರದಿಂದಲೇ ಕಾಣುತ್ತದೆ. ಹತ್ತಲು ಮೆಟ್ಟಿಲುಗಳಿವೆ. ಅದನ್ನು ಏರುತ್ತಾ ಹೋದಂತೆ ಗುಡಿಬಂಡೆ ಊರಿನ ಪೂರ್ತಿ ದರ್ಶನವಾಗುತ್ತದೆ. ಊರಿನಲ್ಲಿರುವ ಜೈನ ಬಸದಿ, ದೂರದಲ್ಲಿ ಕಾಣುವ ಬೈರಸಾಗರ, ಗುಡಿಬಂಡೆ ಮುಖ್ಯರಸ್ತೆ, ದೂಳೆಬ್ಬಿಸುತ್ತಾಹೋಗುವ ಮಾರುತಿ ಬಸ್ಸು, ಎಲ್ಲವೂ ಒಂದು ಸಿನಿಮಾ ರೀಲಿನಂತೆ ಕಣ್ಮುಂದೆ ಹಾದು ಹೋಗುತ್ತದೆ. ಮೇಲೆ ಹೋದಂತೆ ಅರ್ಧ ದಾರಿಯಲ್ಲಿ ಕೋಟೆಯ ಹೆಬ್ಟಾಗಿಲು ಸಿಗುತ್ತದೆ. ಬೆಟ್ಟದ ಮೇಲೆ ಹತ್ತೂಂಬತ್ತು ನೀರಿನ ದೊಣೆಗಳಿವೆ. ತಿರುಮಲ ವೆಂಕಟರಮಣನ ಸುಂದರವಾದ ದೇವಸ್ಥಾನವಿದೆ. ಅದರ ಮುಂದೆ ಎತ್ತರವಾದ ದೀಪ ಸ್ಥಂಭ. ದೀಪಾವಳಿ ಹಬ್ಬದಲ್ಲಿ ಇಲ್ಲಿ ದೊಡ್ಡ ಜಾತ್ರೆಯಾಗುತ್ತದೆ. ಕೋಟೆ ಗೋಡೆಯಿಂದ ಹೊರಚಾಚುವಂತೆ ಬಂಡೆ ಇದೆ. ಮಹಾರಾಜರ ಆಡಳಿತವಿದ್ದ ಕಾಲದಲ್ಲಿ ಈ ಗೋಡೆಯ ಮೇಲೆ ಕೈದಿಗಳನ್ನು ನಿಲ್ಲಿಸಿ, ಕೆಳಗೆ ತಳ್ಳುತ್ತಿದ್ದರಂತೆ. ಕೋಟೆಯ ಗೋಡೆ ಕೆಲವು ಕಡೆ ಬಿದ್ದು ಹೋಗಿದೆ. ಬೈರೇಗೌಡ ಈ ಕೋಟೆ ಆಳಿದ ಮುಖ್ಯ ಪಾಳೆಗಾರ. ಇವನು ಅಕ್ಕ ಪಕ್ಕದ ಸಂಸ್ಥಾನಗಳ ಮೇಲೆ ದಾಳಿ ಮಾಡಿ ಸಂಪತ್ತನ್ನು ಈ ಕೋಟೆಯಲಿ ಅಡಗಿಸುತ್ತಿದ್ದರಂತೆ. ಅವನ ಹಾವಳಿಯಿಂದ ಬೇರೆ ಪಾಳೆಗಾರರು ರೋಸಿ ಹೋಗಿದ್ದರಂತೆ. ಆದ್ದರಿಂದ ಇವನ ಹೆಸರಿನ ಮುಂದೆ ಹಾವಳಿ ಅನ್ವರ್ಥ ನಾಮವಾಗಿ ಸೇರಿಕೊಂಡಿದೆ. ಈತನೇ ಕಟ್ಟಿಸಿದ ಭೈರಸಾಗರ ಅಮಾನಿಕೆರೆ ಇಂದಿಗೂ ಈ ಭಾಗದ ಅತಿ ದೊಡ್ಡ ಕೆರೆ. ನೂರಾರು ವರ್ಷಗಳಿಂದ ಕೋಟೆ ಇಂದಿಗೂ ಗಾಳಿಮಳೆಗಳ ಹೊಡೆತಕ್ಕೆ ಎದುರಾಗಿ ಅಲ್ಲಾಡದೆ ನಿಂತಿದೆ. ಸಂತೋಷದ ಸಂಗತಿ ಎಂದರೆ, ಗುಡಿಬಂಡೆ ನಾಗರಿಕರಿಗೆ ತಮ್ಮ ಊರಿನಲ್ಲಿರುವ ಕೋಟೆಯ ಮಹತ್ವದ ಅರಿವಿದೆ. ಅದನ್ನು ಶುಚಿಯಾಗಿ ಇಟ್ಟಕೊಳ್ಳಬೇಕೆಂಬ ಕಾಳಜಿ ಇದೆ. ಚಾರಣಕ್ಕೆ ಬಂದವರು ರಾತ್ರಿ ವೇಳೆಯಲ್ಲಿ ಮೇಲೆ ತಂಗಲೂ ಬಿಡುವುದಿಲ್ಲ. ಸ್ಥಳಿಯರ ಕಣ್ಗಾವಲಿನಿಂದಾಗಿ ಇಲ್ಲಿ ಯಾವುದೇ ಅನೈತಿಕ ಚಟುವಟಿಗಳಿಗೆ ಅವಕಾಶವಿಲ್ಲ. ಶ್ರೀನಾಥ್.ಎಲ್