Advertisement

ವಿದ್ಯಾರ್ಥಿಗಳಿಗೆ ಪಡಿತರ; 5 ತಿಂಗಳ ಬಿಸಿಯೂಟ ಧಾನ್ಯ ವಿತರಣೆಗೆ ಸೂಚನೆ

11:50 PM Nov 06, 2020 | mahesh |

ಬೆಂಗಳೂರು: ಬಿಸಿಯೂಟ ಯೋಜನೆಯಡಿ ಜೂನ್‌ನಿಂದ ಅಕ್ಟೋಬರ್‌ವರೆಗಿನ 107 ದಿನಗಳ(ಸಾರ್ವತ್ರಿಕ ರಜಾದಿನ ಹೊರತುಪಡಿಸಿ) ಆಹಾರ ಧಾನ್ಯವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಇದರಂತೆ ಆಹಾರ ಧಾನ್ಯ ವಿತರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

Advertisement

ಜೂನ್‌ನಿಂದ ಮತ್ತು ಜುಲೈ ತಿಂಗಳ ಒಟ್ಟು 53 ದಿನಗಳಿಗೆ ಅನ್ವಯವಾಗುವಂತೆ ಏನು ವಿತರಿಸಬೇಕು, ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ 54 ದಿನಗಳಿಗೆ ಹೇಗೆ ವಿತರಿಸಬೇಕು ಎಂಬ ಬಗ್ಗೆ ಸೂಚನೆಯನ್ನೂ ನೀಡಲಾಗಿದೆ.

ವಿದ್ಯಾರ್ಥಿಗಳು ಬರುವಂತಿಲ್ಲ
– ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು.
– ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಬಾರದು.
– ಪಾಲಕರನ್ನೂ ಒಮ್ಮೆಗೆ ಕರೆಯಿಸದೆ ಹಂತ ಹಂತವಾಗಿ ಕರೆಯಿಸಿ ವಿತರಿಸಬೇಕು.
– ಉತ್ತಮ ಸ್ಥಿತಿಯ ಆಹಾರ ಧಾನ್ಯವನ್ನೇ ವಿತರಿಸಬೇಕು.
– ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯ ನೀಡಬೇಕು.
– ಶಾಲಾ ಸಮಯದಲ್ಲೇ ವಿತರಣೆ ಮಾಡಬೇಕು
– ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದು ಪರಿಶೀಲಿಸಬೇಕು.
– ವಿತರಣ ವ್ಯವಸ್ಥೆಗೆ ಅಡುಗೆ ಸಿಬಂದಿಯನ್ನು ಬಳಸಿಕೊಳ್ಳಬೇಕು.

1- 5ನೇ ತರಗತಿ
ಪ್ರತೀ ಮಗುವಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ತೊಗರಿಬೇಳೆಯಂತೆ 53 ದಿನಗಳಿಗೆ (ಜೂನ್‌-ಜುಲೈ) 4.5 ಕೆಜಿ ಅಕ್ಕಿ, 800 ಗ್ರಾಂ ಗೋಧಿ, 3.74 ಕೆಜಿ ತೊಗರಿಬೇಳೆ.

6- 8ನೇ ತರಗತಿ
53 ದಿನಗಳಿಗೆ 6.75 ಕೆಜಿ ಅಕ್ಕಿ, 1.2 ಕೆಜಿ ಗೋಧಿ ಮತ್ತು 4.6 ಕೆಜಿ ತೊಗರಿಬೇಳೆ

Advertisement

9-10ನೇ ತರಗತಿ
53 ದಿನಗಳಿಗೆ 7.95 ಕೆಜಿ ಅಕ್ಕಿ, 4.6 ಕೆಜಿ ತೊಗರಿಬೇಳೆ

Advertisement

Udayavani is now on Telegram. Click here to join our channel and stay updated with the latest news.

Next