Advertisement

ರೇಷನಿಂಗ್‌ ವ್ಯವಸ್ಥೆ: ನಗರದಲ್ಲಿ ಮತ್ತೆ ಹೆಚ್ಚಿದೆ ನೀರಿನ ಸಮಸ್ಯೆ

12:31 AM May 07, 2019 | Sriram |

ವಿಶೇಷ ವರದಿ- ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೀರು ರೇಷನಿಂಗ್‌ ನಿರ್ವಹಣೆಯಲ್ಲಿ ತಲೆದೋರಿರುವ ಸಮಸ್ಯೆಗಳಿಂದಾಗಿ ಕುಡಿಯವ ನೀರು ವಿತರಣೆ ಗೊಂದಲದ ಗೂಡಾಗಿದೆ. ನೀರು ಸರಬರಾಜು ಮಾರ್ಗದಲ್ಲಿರುವ ಕೊನೆಯ ಬಡಾವಣೆ, ಎತ್ತರದ ಪ್ರದೇಶಗಳಿಗೆ ಲಭ್ಯತೆ ದುಸ್ತರವಾಗಿದ್ದು, ನಗರ ಜನತೆ ಮತ್ತೆ ಚx ಸಂಕಷ್ಟ ಅನುಭವಿಸುವಂತಾಗಿದೆ.

Advertisement

ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ನಗರಕ್ಕೆ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮೇ 1ರಿಂದ ಎರಡನೇ ಬಾರಿಗೆ ನೀರು ರೇಷನಿಂಗ್‌ ಜಾರಿಯಲ್ಲಿದೆ. ಇದರಂತೆ ಎರಡು ದಿನ ನೀರು ಸ್ಥಗಿತ ಮತ್ತು ನಾಲ್ಕು ದಿನ ನೀರು ಸರಬರಾಜು ಸೂತ್ರವನ್ನು ಪ್ರಕಟಿಸಲಾಗಿದೆ. ಇದರನ್ವಯ ಬೆಳಗ್ಗೆ 6 ಗಂಟೆಯಿಂದ ಸ್ಥಗಿತಗೊಳ್ಳುವ ನೀರು 48 ತಾಸುಗಳ ಬಳಿಕ ಬೆಳಗ್ಗೆ 6 ಗಂಟೆಗೆ ಪುನರಾರಂಭಗೊಳ್ಳುತ್ತಿದೆ. ಅಲ್ಲಿಂದ 96 ತಾಸುಗಳವರೆಗೆ ನೀರು ದಿನಂಪ್ರತಿ ನೀರು ಪೂರೈಕೆಯಾಗುತ್ತದೆ. ಆದರೆ, ವಾಸ್ತವದಲ್ಲಿ ಈ 96 ತಾಸುಗಳ ಅವಧಿಯಲ್ಲಿ ಒಂದು ಪ್ರದೇಶಕ್ಕೆ 10ರಿಂದ 12 ತಾಸು ಮಾತ್ರ ನೀರು ಲಭ್ಯ.

ಎರಡು ದಿನಗಳ ನೀರು ಪೂರೈಕೆ ಸ್ಥಗಿತದ ಬಳಿಕ ತುಂಬೆಯಿಂದ ನಗರಕ್ಕೆ ನೀರು ಸಂಗ್ರಹ ಸ್ಥಾವರಗಳಿಗೆ ಸರಬರಾಜು ಆರಂಭಗೊಂಡಾಗ ವಾಲ್‌Ìಮೆನ್‌ಗಳು ತಮ್ಮ ಪಂಪ್‌ಹೌಸ್‌ವ್ಯಾಪ್ತಿಯ ನೀರು ವಿತರಣೆ ಮಾರ್ಗದ ಪ್ರದೇಶಗಳಿಗೆ ವಿತರಣೆ ಆರಂಭಿಸುತ್ತಾರೆ. ಎಲ್ಲ ಪ್ರದೇಶಗಳಿಗೆ ಒಮ್ಮೆಲೆ ನೀರು ಬಿಟ್ಟರೆ ಮಾರ್ಗದ ಯಾವುದೇ ಪ್ರದೇಶಗಳಿಗೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಅದುದರಿಂದ ಒಂದು ಪ್ರದೇಶದ ವಾಲ್‌Ìಗಳನ್ನು ಒಪನ್‌ ಮಾಡಿ ಒಂದು ಅಥವಾ ಎರಡು ತಾಸು ನೀರು ನೀಡಿ ಬಂದ್‌ ಮಾಡುತ್ತಾರೆ. ಇನ್ನೊಂದು ಪ್ರದೇಶದ ವಾಲ್‌Ì ಒಪನ್‌ ಮಾಡಿ ಅಲ್ಲಿಗೆ ಅದೇ ರೀತಿ ನೀರು ನೀಡುತ್ತಾರೆ. ಆದರೆ ನೀರು ಸಮಸ್ಯೆ ಇಲ್ಲದಿದ್ದ ಸಂದರ್ಭದಲ್ಲೂ ಎರಡು ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದ್ದ ಪ್ರದೇಶಗಳಿಗೆ ಎರಡು ದಿನಗಳಿಗೊಮ್ಮೆ ಪ್ರಸ್ತುತ 4 ತಾಸುಗಳ ನೀರು ನೀಡಲಾಗುತ್ತದೆ. ಅಂದರೆ ತುಂಬೆಯಿಂದ 96 ತಾಸು ನೀರು ಸರಬರಾಜಾದರೂ ಈ ಅವಧಿ ಯಲ್ಲಿ ಜನರಿಗೆ ಲಭ್ಯವಾಗುವ ನೀರು 12 ತಾಸುಗಳು. ಎರಡು ದಿನ ಸ್ಥಗಿತದ ಬಳಿಕ ಬೆಳಗ್ಗೆ 6 ಗಂಟೆಗೆ ನೀರು ವಿತರಣೆ ಆರಂಭವಾಗುತ್ತದೆ ಎಂದು ಪ್ರಕಟನೆ ಹೇಳುತ್ತದೆಯಾದರೂ ಹೆಚ್ಚಿನ ಪ್ರದೇಶಗಳಿಗೆ ನೀರು ಬರುವಾಗ ರಾತ್ರಿಯಾಗುತ್ತದೆ.

ಎತ್ತರದ ಪ್ರದೇಶಗಳಿಗೆ
ನೀರು ದುಸ್ತರ
ಎರಡು ದಿನ ನೀರು ಸ್ಥಗಿತಗೊಂಡು ನೀರು ಸರಬರಾಜು ಆಗುವ ಹಿನ್ನೆಲೆಯಲ್ಲಿ ವಿತರಣೆ ಮಾರ್ಗದ ಎಲ್ಲ ಟ್ಯಾಂಕ್‌ಗಳು, ನೆಲದಡಿಯ ಟ್ಯಾಂಕ್‌ಗಳಲ್ಲಿ (ಸಂಪು) ನೀರು ಸಂಗ್ರಹ ಕಾರ್ಯ ಆರಂಭಗೊಳ್ಳುತ್ತದೆ. ಇನ್ನೊಂದೆಡೆ ಈ ಎಲ್ಲ ಟ್ಯಾಂಕ್‌ಗಳು ತುಂಬಿ ಕೊನೆಯ ಹಂತದಲ್ಲಿರುವ ಮನೆಗಳಿಗೆ ನೀರು ತಲುಪುವಾಗ ವಿಳಂಬವಾಗುತ್ತದೆ. ಅಷ್ಟರಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ.

ಪ್ರಶರ್‌ ಕೊರತೆಯಿಂದ ಎತ್ತರ ಪ್ರದೇಶಗಳಿಗೆ ತುಂಬೆಯಿಂದ ಸರಬರಾಜಾಗುವ ನೀರು ವಿತರಣೆ ಅಪರೂಪವಾಗಿದೆ. ಈ ಭಾಗಕ್ಕೆ ಸದ್ಯಕ್ಕೆ ಟ್ಯಾಂಕರ್‌ ನೀರೇ ಗತಿಯಾಗಿದೆ.

Advertisement

ನೀರಿನ ಸಮಸ್ಯೆ ಹೆಚ್ಚಿರುವ ಪ್ರದೇಶ
ನಗರದಲ್ಲಿ ನೀರಿನ ಸಮಸ್ಯೆ ಸಾರ್ವತ್ರಿಕವಾಗಿದ್ದರೂ ಕೆಲವು ಪ್ರದೇಶಗಳಲ್ಲಿ ಇದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದ್ದು, ಜನತೆ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮುಖ್ಯವಾಗಿ ಪಾಂಡೇಶ್ವರ, ಪೊಲೀಸ್‌ ಲೇನ್‌, ಒಲ್ಡ್‌ಕೆಂಟ್‌ ರಸ್ತೆ, ದೂಮಪ್ಪ ಕಾಂಪೌಂಡ್‌, ವೈದ್ಯನಾಥ ನಗರ, ಅತ್ತಾವರದ 7ನೇ ಬ್ಲಾಕ್‌, ಬಾಬುಗುಡ್ಡೆ , ಮಾರ್ನಮಿಕಟ್ಟೆ, ಮಂಗಳಾದೇವಿಯ ಸುಭಾಗ್‌ನಗರ, ಎಮ್ಮೆಕೆರೆ, ಶಿವನಗರ, ಹೊಗೆ ಬಜಾರ್‌, ಕುಡ್ತಡ್ಕ ಸನ್ಯಾಸಿಗುಡ್ಡೆ, ದಂಬೇಲ್‌, ಅಶೋಕನಗರ, ಕೋಡಿಕಲ್‌ನ ಕೆಲವು ಭಾಗಗಳು, ಮರೋಳಿ ಭಾಗದ ಜಯಶ್ರೀ ಗೇಟ್‌, ಬಜೊjàಡಿ, ಮರಿಯ ಪ್ರೇಮಗುಡ್ಡೆ, ಹೋಲಿಹಿಲ್‌, ಪಚ್ಚನಾಡಿಯ ಆಶ್ರಯ ಕಾಲನಿ, ತಿರುವೈಲ್‌ನ ಪ್ರದೇಶದ ಜ್ಯೋತಿ ನಗರ, ವಾಮಂಜೂರು ಜಂಕ್ಷನ್‌, ಬಿಜೈ ನ್ಯೂರೋಡ್‌, ಸಂಕಾಯಿ ಗುಡ್ಡೆ, ಭಜನ ಮಂದಿರ ರಸ್ತೆ, ಬಂದರು ಪ್ರದೇಶದ ಬೀಬಿ ಅಲಾಬಿ ರಸ್ತೆ, ಬಜಿಲಕೇರಿ, ಮುಖ್ಯಪ್ರಾಣ ದೇವಾಲಯ ರಸ್ತೆ, ಕುಳಾಯಿ ಹೊನ್ನಕಟ್ಟೆ, ಕುಂಜತ್ತಬೈಲ್‌, ಮೇರಿಹಿಲ್‌ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.
ವಸತಿ ಸಂಕೀರ್ಣಗಳ ಸಮಸ್ಯೆ ಇನ್ನೊಂದು ಸ್ವರೂಪದ್ದಾಗಿದೆ. ಉದಾಹರಣೆಗೆ ಒಂದು ಫ್ಲ್ಯಾಟ್‌ನಲ್ಲಿ 70ರಿಂದ 80 ಮನೆಗಳಿದ್ದರೆ ಪಾಲಿಕೆ ನೀರಿನಲ್ಲಿ ಮುಕ್ಕಾಲು ಇಂಚಿನ ಎರಡು ಸಂಪರ್ಕಗಳನ್ನು ನೀಡಲಾಗುತ್ತದೆ. ಈಗ ದಿನಂಪ್ರತಿ 2 ತಾಸು ಅಥವಾ ಎರಡು ದಿನಗಳಿಗೊಮ್ಮೆ 4 ತಾಸು ನೀರು ವಿತರಣೆ ಆದರೆ ಎಲ್ಲ ಮನೆಗಳಿಗೆ ಕುಡಿಯಲು ನೀರು ಸಾಕಾಗುವುದಿಲ್ಲ.

ಮಳೆಗಾಗಿ ನಿರೀಕ್ಷೆ
ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನಮಟ್ಟ ದಿನಕ್ಕೆ 5ರಿಂದ 5 ಸೆಂ.ಮೀ. ಕುಸಿಯುತ್ತಿದೆ. ಸೋಮವಾರ ಬೆಳಗ್ಗೆ 4.38 ಮೀ. ಇದ್ದ ನೀರಿನ ಮಟ್ಟ ಸಂಜೆಯ ವೇಳೆಗೆ 4.34 ಮೀ.ಗೆ ಇಳಿದಿದೆ. ನಗರದ ಬೋರ್‌ವೆàಲ್‌, ತೆರೆದ ಬಾವಿಗಳ ನೀರಿನ ಮಟ್ಟವನ್ನು ಕುಸಿಯುತ್ತಿದೆ. ಪ್ರಸ್ತುತ ರೂಪಿಸಿರುವ ನೀರಿನ ರೇಷನಿಂಗ್‌ ಸ್ವರೂಪ ಮೇ 21ರ ವರೆಗೆ ಜಾರಿಯಲ್ಲಿರುತ್ತದೆ. ಆ ಸಮಯದಲ್ಲಿ ಡ್ಯಾಂನಲ್ಲಿರುವ ನೀರಿನ ಪ್ರಮಾಣವನ್ನು ಅಂದಾಜಿಸಿಕೊಂಡು ಪಾಲಿಕೆ ಮುಂದಿನ ರೇಷನಿಂಗ್‌ ಸ್ವರೂಪವನ್ನು ನಿರ್ಧರಿಸಲಿದೆ. ಈ ತಿಂಗಳ ಮಧ್ಯಭಾಗದಲ್ಲಿ ಮಳೆಯಾದರೇ ಮಾತ್ರ ನೀರಿನ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯಲಿದೆ.

ಟ್ಯಾಂಕರ್‌ನಲ್ಲಿ ನೀರು ಪೂರೈಕೆ
ಎತ್ತರದ ಪ್ರದೇಶಗಳು ಮತ್ತು ನೀರಿನ ಸಮಸ್ಯೆ ಇರುವ ಭಾಗಗಳಿಗೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 5 ಟ್ಯಾಂಕರ್‌ಗಳು ನೀರು ಸರಬರಾಜು ಕಾರ್ಯದಲ್ಲಿ ತೊಡಗಿವೆ. ರೇಷನ್‌ ಪ್ರಕಾರ ಮೇ 7ರಿಂದ ಬೆಳಗ್ಗೆ 6 ಗಂಟೆಯಿಂದ 48 ತಾಸುಗಳ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
 - ನಾರಾಯಣಪ್ಪ ,
ಪ್ರಭಾರ ಆಯುಕ್ತರು ಮನಪಾ

Advertisement

Udayavani is now on Telegram. Click here to join our channel and stay updated with the latest news.

Next