ಜೇವರ್ಗಿ: ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮದ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ, ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಸೊನ್ನ ಎಸ್‌ಜಿಎಸ್‌ವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರವಿರುವ ಬಸವ ಶ್ರೀ ಪದವಿ ಮಹಾ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 129ನೇ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಆಚರಣೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವೇಕಾನಂದರು ಅಂದು ವಿದೇಶದಲ್ಲಿ ಎತ್ತಿಹಿಡಿದ ನಮ್ಮ ದೇಶದ ಆದರ್ಶಗಳನ್ನು ಈಗ ನಾವು ಮತ್ತೂಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅವರ ನಿಜವಾದ ದೇಶಪ್ರೇಮ ಮತ್ತು ಧರ್ಮದ ನಿಲುವು ಇತರರಿಗೆ ಮಾದರಿಯಾಗಿದೆ ಎಂದರು.
ಪ್ರಾಚಾರ್ಯರಾದ ಬಲಭೀಮ ಎಸ್. ಕೋರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಸಾಹು ಗೋಗಿ, ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ, ಜೆಡಿಎಸ್ ವಿಜಯಕುಮಾರ ಹಿರೇಮಠ, ಲಿಂಗರಾಜ ಕೋರಿ, ಉಪನ್ಯಾಸಕರಾದ ಜೆಟ್ಟೆಪ್ಪ ಕಟ್ಟಿಮನಿ, ಸಂಜು ಪಾಟೀಲ, ವಾಹಬ್ ಜೇವರ್ಗಿ, ರಾಜಕುಮಾರ ಜಿರೂಳೆ, ಸಿದ್ಧು ಮಸ್ಕಿ ಮತ್ತಿತರರು ಇದ್ದರು.
ಸಿದ್ಧಲಿಂಗ ಮಾಹೂರ ಸಂಗಿತ ಕಾರ್ಯಕ್ರಮ ನಡೆಸಿಕೊಟ್ಟರು. ಜೆಟ್ಟೆಪ್ಪ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿದ್ಯಾ ಹಿರೇಮಠ ಸ್ವಾಗತಿಸಿದರು, ರಾಜೇಶ್ವರಿ ಕೆಲ್ಲೂರ, ವಿಜಯಲಕ್ಷ್ಮೀ ಆಲೂರ ನಿರೂಪಿಸಿದರು, ದುಂಡಪ್ಪ ಯಂಕಂಚಿ ವಂದಿಸಿದರು.