Advertisement

ಹಳ್ಳಿಗಾಡಿಗೆ ಸಂಚಾರಿ ಪಡಿತರ ವ್ಯವಸ್ಥೆ

08:21 PM Jun 10, 2021 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ತೀರ ಹಳ್ಳಿಗಾಡು ಜನರಿಗೆ ಇಂದಿಗೂ ವಿದ್ಯುತ್‌, ಮೂಲಸೌಕರ್ಯ ಕೊರತೆ ಕಾಡುತ್ತಿದೆ. ವಾಹನ ಓಡಾಟ ಸಾಧ್ಯವಾಗದೇ ಇರುವ ಹಾಗೂ ಪೇಟೆಯಿಂದ ದೂರವಿರುವ ಬೆಳ್ತಂಗಡಿ ತಾಲೂಕಿನ 13 ಹಳ್ಳಿಗಳಿಗೆ ಇಂದಿಗೂ ಪಡಿತರ ವಿತರಣೆಗೆ ಸಂಚಾರಿ ಪಡಿತರ ಕಟ್ಟೆಯನ್ನು ಬಳಸಲಾಗುತ್ತಿದೆ.

Advertisement

ಬೆಳ್ತಂಗಡಿ ತಾಲೂಕಿನ ಪ್ರದೇಶಗಳಲ್ಲಿ ಸತ್ಯನಪಲ್ಕೆ, ಎಳನೀರು, ಬಾಂಜಾರುಮಲೆ, ನೆರಿಯ ಕೋಲೋಡಿ, ಕುತ್ಲೂರು, ನೆಲ್ಲಿಂಗೇರಿ, ಮುಂಡೂರು ಪಲ್ಕೆ, ಕಾಶಿಪಟ್ಣ, ಹನ್ನೆರಡು ಕಾವಲು, ಚಿಬಿದ್ರೆ, ಕುಕ್ಕೇಡಿ ಬುಳ್ಳಕಾರು, ಗುಂಡೂರಿ, ಮುಂಡೂರು ಇಲ್ಲಿಗೆ ನೇರವಾಗಿ ಗೊದಾಮಿನಿಂದ ಸಂಚಾರಿ ಪಡಿತರ ವಿತರಿಸಲಾಗುತ್ತದೆ. ಒಟ್ಟು 13 ಪ್ರದೇಶಗಳಲ್ಲಿ ಬಿಪಿಎಲ್‌-1147, ಎಪಿಎಲ್‌-126, ಅಂತ್ಯೋದಯ 58 ಸೇರಿ 1,205 ಪಡಿತರ ಚೀಟಿ ಇದೆ.

ಮಾಸಿಕ ವಾರದಲ್ಲಿ ಒಂದು ದಿನ ನಿಗದಿ ಪಡಿಸಿ ನೇರವಾಗಿ ಪಡಿತರ ವಿತರಿಸುವ ಕ್ರಮ ಇಂದಿಗೂ ಚಾಲ್ತಿಯಲ್ಲಿದೆ. ಬಾಂಜಾರು ಮಲೆ, ಎಳನೀರು, ಕುತ್ಲೂರಿನಂತ ತೀರ ದುರ್ಗಮ ಪ್ರದೇಶದ ಮಂದಿಗೆ ಇದು ಅನಿವಾರ್ಯವೂ ಕೂಡ. ಸ್ಥಳೀಯವಾಗಿ ಯಾವುದೇ ಸಹಕಾರಿ, ಸಂಘಗಳು ಅಥವಾ ಗ್ರಾ.ಪಂ., ಅಂಗವಿಕಲರು ಶಾಖೆ ತೆರೆಯಲು ಮುಂದಾದಲ್ಲಿ ಆಹಾರ ಇಲಾಖೆ ಅವಕಾಶ ಕಲ್ಪಿಸಲಿದೆ. ಜಿಲ್ಲೆಯಲ್ಲಿ ಬೆಳ್ತಂಗಡಿ 13, ಪುತ್ತೂರು ತಾಲೂಕಿನ 10 ಕಡೆಗಳಲ್ಲಿ ಸಂಚಾರಿ ಪಡಿತರ ವ್ಯವಸ್ಥೆ ಹೊಂದಿರುವ ತಾಲೂಕುಗಳಾಗಿವೆ. ಈ ಪೈಕಿ ಹಿಂದೆ ಸಂಚಾರಿ ಪಡಿತರ ವಿತರಣೆ ವ್ಯವಸ್ಥೆ ಇದ್ದ ಮೂಡುಕೋಡಿಯಲ್ಲಿ ಜೂ. 9ರಂದು ವೇಣೂರು ಪ್ರಾ.ಕೃ.ಸ. ಸಂಘದ ಆಶ್ರಯದಲ್ಲಿ ಪಡಿತರ ನೂತನ ಅಂಗಡಿ ತೆರೆಯಲಾಗಿದೆ. ಸ್ವಯಂಪ್ರೇರಿತರಾಗಿ ಪಡಿತರ ಚೀಟಿ ರದ್ದು ಪಡಿಸಲು ಜೂ. 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಆದಾಯ ತೆರಿಗೆ ಇಲಾಖೆ ಯಿಂದ ಆಯುಕ್ತರ ಕಚೇರಿಯು ಡಾಟಾ ಪಡೆದು ಎಪ್ರಿಲ್‌ನಲ್ಲಿ ಸಂಗ್ರಹಿಸಿದ ಮಾಹಿತಿಯಂತೆ 9 ಅಂತ್ಯೋದಯ, 150 ಬಿಪಿಎಲ್‌ ಸೇರಿ 159 ಪಡಿತರ ರದ್ದು ಪಡಿಸಲಾಗಿದೆ.  ಜನವರಿ ತಿಂಗಳಿಂದ ಈವರೆಗೆ 254 ಮಂದಿ ಸ್ವಯಂಪ್ರೇರಿತವಾಗಿ ಪಡಿತರ ಚೀಟಿ ಒಪ್ಪಿಸಿದ್ದಾರೆ. ಕಂದಾಯ ಇಲಾಖೆಯಿಂದ ಮೇ ತಿಂಗಳಲ್ಲಿ ಸಂಗ್ರಹಿಸಿದ ದಾಖಲೆಯಂತೆ 194 ಪಡಿತರ ಚೀಟಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. 2019ರಲ್ಲಿ ದಂಡ ಸಂಗ್ರಹ ಅಕ್ರಮ ಪಡಿತರ ಚೀಟಿ ರದ್ದು ಪಡಿಸಿ 8.80 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಈ ವರ್ಷ ಜೂ. 30ರ ಒಳಗೆ ಹಿಂದಿರುಗಿಸದೆ ಹೋದಲ್ಲಿ ಮತ್ತೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

62,783 ಪಡಿತರ ಚೀಟಿ :

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಅಂತ್ಯೋ ದಯ-3,329, ಬಿಪಿಎಲ್‌-44,465, ಎಪಿ ಎಲ್‌- 14,989 ಸೇರಿ 62,783 ಪಡಿತರ ಚೀಟಿ ಹೊಂದಲಾಗಿದೆ. ಆದಾಯ ತೆರಿಗೆ ಪಾವತಿದಾರರು, 1.20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಪಡಿತರ ಚೀಟಿ ರದ್ದುಗೊಳಿಸಲಾಗುತ್ತಿದೆ.

ಅಕ್ಕಿ ವಿತರಣೆ :

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ ಹೊಂದಿದ ಪ್ರತಿ ಸದಸ್ಯನಿಗೆ ಕೇಂದ್ರದ 5 ಕೆ.ಜಿ. ಹಾಗೂ ರಾಜ್ಯದ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್‌ ಒಂದಕ್ಕೆ 35 ಕೆ.ಜಿ. ಹಾಗೂ ಕೇಂದ್ರದ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಎಪಿಎಲ್‌ ಕಾರ್ಡ್‌ ದಾರರು ಅಕ್ಕಿ ಬೇಕೆಂದು ಗ್ರಾ.ಪಂ.ಗಳಲ್ಲಿ ನೋಂದಾಯಿಸಿದಲ್ಲಿ ಪ್ರತಿ ಕಾರ್ಡ್‌ಗೆ 10 ಕೆ.ಜಿ. ನೀಡಲಾಗುತ್ತದೆ. ಕೆ.ಜಿ.ಗೆ 15 ರೂ. ನೀಡಬೇಕಾಗುತ್ತದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಪಡಿತರ ಕಾರ್ಡ್‌ದಾರರಿಗೆ ತೊಂದರೆ ಯಾಗದಂತೆ ಆಧಾರ್‌ ಒಟಿಪಿ ಇಲ್ಲದಿದ್ದರೆ ಸ್ಯಾನಿಟೈಸರ್‌ ಬಳಸಿ ತಂಬ್‌ ಪಡೆಯಲಾಗುತ್ತದೆ. ಜತೆಗೆ ಅಂಗವಿಕಲರಿಗೆ ವಿನಾಯಿತಿಯಲ್ಲಿ ನೀಡ ಲಾಗುತ್ತಿದೆ. ಸಂಚಾರಿ ಪಡಿತರದಲ್ಲಿ 1,205 ಮಂದಿಗೆ ನೇರ ವಾಗಿ ಗೋದಾಮ್‌ನಿಂದ ವಿತರಿಸ ಲಾಗುತ್ತಿದೆ. ಹೊಸ ಪಡಿತರರು ಅರ್ಜಿ ಸಲ್ಲಿಸಿದ್ದರೆ ಅವ ರಿಗೆ 10 ಕೆ.ಜಿ. ಅಕ್ಕಿ ವಿತರಿಸ ಲಾಗುತ್ತದೆ. ವಿಶ್ವ ಕೆ., ಆಹಾರ ನಿರೀಕ್ಷಕರು, ಬೆಳ್ತಂಗಡಿ

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next