Advertisement

ಬಿಪಿಎಲ್‌ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ 10 ಕೆ.ಜಿ. ಅಕ್ಕಿ ನೀಡಲು ಸರಕಾರದ ಚಿಂತನೆ

03:34 AM May 15, 2021 | Team Udayavani |

ಬೆಂಗಳೂರು : ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದರೂ ಕಾರ್ಡ್‌ ಸಿಗದ ಕುಟುಂಬಗಳಿಗೆ ಮೇ ಮತ್ತು ಜೂನ್‌ ತಿಂಗಳಲ್ಲಿ ತಲಾ 10 ಕೆ.ಜಿ. ಅಕ್ಕಿ ನೀಡಲು ಸರಕಾರ ತೀರ್ಮಾನಿಸಿದೆ.

Advertisement

ಇದರಿಂದ ಸುಮಾರು 1.50 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಎಪಿಎಲ್‌ ಕಾರ್ಡ್‌ದಾರ ಪ್ರತೀ ಕುಟುಂಬಕ್ಕೆ ಕೆ.ಜಿ.ಗೆ 15 ರೂ. ರಿಯಾಯಿತಿ ದರದಲ್ಲಿ 10 ಕೆ.ಜಿ. ಅಕ್ಕಿ ನೀಡಲು ಆದೇಶ ಹೊರಡಿಸಲಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಸಹಿತ ಸಣ್ಣಮಟ್ಟದ ಪ್ಯಾಕೇಜ್‌ ಘೋಷಿಸುವ ಬಗ್ಗೆ ಮೇ 10ರಂದು “ಉದಯವಾಣಿ’ ವಿಶೇಷ ವರದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next