Advertisement
ತಾಲೂಕಿನಲ್ಲಿ 72138 ಬಿಪಿಎಲ್ ಕುಟುಂಬ, 6172 ಎಪಿಎಲ್ ಕುಟುಂಬ ಹಾಗೂ 3926 ಕುಟುಂಬ ಅಂತ್ಯೋದಯ ಚೀಟಿ ಹೊಂದಿದ್ದಾರೆ.ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರು ವವರಿಗೆ ಸರ್ಕಾರ ಐದು ಕಿಲೋಗೆ ಅಕ್ಕಿಗೆ ಹಣ ಸಂದಾಯ ಮಾಡಲಿದೆ. ಆದರೆ ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಹೊಂದಿಲ್ಲ. ಕೆಲವರು ಖಾತೆ ಹೊಂದಿ ದ್ದರೂ ಅದು ನಿಷ್ಕ್ರಿಯವಾಗಿದೆ. ಇನ್ನು ಕೆಲವರು ಆಧಾರ್ ಲಿಂಕ್ ಮಾಡಿಸಿಲ್ಲ. ಐಎಫ್ಎಸ್ಸಿ ಕೋಡ್ ಸೇರಿದಂತೆ ಕೆಲ ಸಮಸ್ಯೆಗಳಿವೆ. ಹಾಗಾಗಿ ಅವರಿಗೆ ಸರ್ಕಾರದಿಂದ ಹಣ ಸಂದಾಯ ಅಗುವುದು ಅನುಮಾನವಾಗಿದೆ.
Related Articles
Advertisement
ಡಬ್ಬಲ್ ಧಮಾಕ: ತಾಲೂಕಿನಲ್ಲಿ 3926 ಕುಟುಂಬದಿಂದ 16393 ಅಂತ್ಯೋದಯ ಪಡಿತರ ದಾರರಿ ದ್ದಾರೆ. ಇದರ ಮೂರು ಮಂದಿಗೆ ಕಡಿಮೆ ಇರುವ 4977 ಮಂದಿಗೆ 30 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ, ಅವರಿಗೆ ರಾಜ್ಯ ಸರ್ಕಾರದ ಅನ್ನಭಾಗ್ಯದ ಹಣ ದೊರೆಯುವುದಿಲ್ಲ, ಇನ್ನು ಅಂತ್ಯೋದಯ ಪಡಿತರ ಚೀಟಿ ಹೊಂದಿರು ಮೂರು ಯುನಿಟ್‌ಗಿಂತೆ ಹೆಚ್ಚು ಹೊಂದಿರು 11416 ಸದಸ್ಯರಿದ್ದು, ಅವರಿಗೆ 30 ಕಿಲೋ ಅಕ್ಕಿ ಜೊತೆ 170 ರೂ. ನಂತೆ 1,94,720 ರೂ ಹಣ ಬ್ಯಾಂಕ್ ಖಾತೆಗೆ ಮಾಸಿಕವಾಗಿ ಜಮೆಯಾಗಲಿದೆ. ಅನ್ನಭಾಗ್ಯ ಯೋಜನೆಯಿಂದ ರಾಜ್ಯ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿ ಇದರಲ್ಲಿ ತಾಲೂಕಿಗೆ ಬಿಪಿಎಲ್ ಹಾಗೂ ಅಂತ್ಯೋದಯ ಸೇರಿ ಒಟ್ಟು 41908470 ರೂ. ಮಾಸಿಕವಾಗಿ ಹಣ ಸಂದಾಯವಾಗಲಿದೆ.
ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಭಾಗ್ಯ ಯೋಜನೆಯಿಂದ ರಾಜ್ಯ ಸರ್ಕಾರ ನೇರನಗದು ವರ್ಗಾವಣೆಯಿಂದ ವಂಚಿತರಾಗುತ್ತಿದ್ದು ಅವರನ್ನು ಪತ್ತೆ ಹಚ್ಚಿ ಕಳೆದ 20 ದಿವಸದ ಹಿಂದೆಯೇ ಮಾಹಿತಿ ನೀಡಲಾಗಿದೆ. ಎಲ್ಲರೂ ಅಂಚೆ ಕಚೇರಿ ಅಥವಾ ಬ್ಯಾಂಕ್ ಖಾತೆ ಮಾಡಿಸಿಕೊಂಡಿರಬಹುದು. ● ಎಚ್.ಪಿ.ವಾಸು, ಶಿರಸ್ತೇದಾರ್ ಆಹಾರ ಮತ್ತು ನಾಗರಿಕ ಸೇವೆ ಇಲಾಖೆ.
-ಶಾಮಸುಂದರ್ ಕೆ. ಅಣೇನಹಳ್ಳಿ