ಶ್ರೀರಂಗಪಟ್ಟಣ : ಅಧಿಕಾರಿಗಳ ಎಡವಟ್ಟಿನಿಂದ ಬಡ ಆಟೋ ಚಾಲಕನೋರ್ವನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಿತ್ರ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಆಡಳಿತ ಅಧಿಕಾರಿಗಳಿಂದ ಗಂಜಾಮ್ ಗ್ರಾಮದ ಬಡ ಆಟೋ ಚಾಲಕ ಲೊಕೇಶ್ ಎಂಬುವರ ಪಡಿತರ ಕಾರ್ಡ್ ರದ್ದಾಗಿದೆ. ಬಡ ಆಟೋ ಚಾಲಕನಾಗಿರುವ ಲೋಕೇಶ್ ತಮ್ಮ 13 ವರ್ಷದ ಮಗ ಕುಮಾರ್ ನ ವಿದ್ಯಾಭ್ಯಾಸಕ್ಕೆ ಶ್ರೀರಂಗಪಟ್ಟಣ ತಾಲೂಕು ಆಡಳಿತದಿಂದ ಆದಾಯ ಪ್ರಮಾಣಕ್ಕೆ ಅರ್ಜಿ ಸಲ್ಲಿಸಿದ್ದು 20 ಸಾವಿರ ಆದಾಯದ ಬದಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಧ್ಯಾರ್ಥಿ ಕುಮಾರ್ ಗೆ 2 ಲಕ್ಷ ಆದಾಯ ಎಂದು ನಮೂದಿಸಿ ಪ್ರಮಾಣತ್ರ ವಿತರಿಸಿದ್ದಾರೆ.
ಅವಿದ್ಯಾವಂತನಾದ ಈ ಪ್ರಮಾಣ ಪತ್ರ ಪಡೆದು ಶಾಲೆಗೆ ಕೊಡುವಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಇಷ್ಟರಲ್ಲಿ ತಾಲೂಕು ಆಡಳಿತ ಈ ಆಟೋ ಚಾಲಕನಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಇದರಿಂದ ಬಡ ಆಟೋ ಚಾಲಕ ಲೊಕೇಶ್ ಕಳೆದ ತಿಂಗಳಿಂದ ಅನ್ನಭಾಗ್ಯದ ಅಕ್ಕಿ ಸಿಗದಂತಾಗಿದೆ. ಅಧಿಕಾರಿಗಳ ತಪ್ಪಿನಿಂದ ಈ ಬಡ ಚಾಲಕನಿಗೆ ಅನ್ಯಾಯವಾಗಿದ್ದರೂ ಇದೀಗ ಈ ಅಧಿಕಾರಿಗಳು ತಪ್ಪು ಸರಿಪಡಿಸದೆ, ಈ ಚಾಲಕನಿಗೆ ಮತ್ತೆ ಬಿಪಿಎಲ್ ಕಾರ್ಡ್ ಕೊಡಲು ಸತಾಯಿಸುತ್ತಾ ಅತ್ತಿಂದಿತ್ತ ಅಲೆದಾಡುಸುತ್ತಿದ್ದಾರೆ.
ಇದನ್ನೂ ಓದಿ :ದಾಂಡೇಲಿಯಲ್ಲಿ ಪುಗಡಿ ನೃತ್ಯದ ಮೂಲಕ ಗಣಪತಿ ಆರಾಧನೆ : ಮರಾಠಿ ಸಮುದಾಯದ ಜಾನಪದ ನೃತ್ಯ
ಇದರಿಂದ ಕಂಗಾಲಾಗಿರೋ ಆಟೋ ಚಾಲಕ ತಾಲೂಕು ಆಡಳಿತಕ್ಕೆ ಮತ್ತೆ ಬಿಪಿಎಲ್ ಕಾರ್ಡ್ ಕೊಟ್ಟು ಅನ್ನಭಾಗ್ಯದ ಅಕ್ಕಿ ಕೊಡಿ ಇಲ್ಲವೆ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾನೆ.