Advertisement

ಧನಂಜಯ ರತ್ನಾಕರನ ಸೌಂಡ್‌ಜೋರು!

01:38 PM Aug 28, 2021 | Team Udayavani |

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ “ರತ್ನನ್‌ ಪ್ರಪಂಚ’ದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Advertisement

ಧನಂಜಯ್‌ ಚಿತ್ರದಲ್ಲಿ ಮಧ್ಯಮ ಕುಟುಂಬದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಕಾಮಿಡಿ, ಸೆಂಟಿಮೆಂಟ್‌, ಲವ್‌, ಎಮೋಶನ್ಸ್‌ ಎಲ್ಲದರ ಸಣ್ಣ ಝಲಕ್‌ ಅನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಧನಂಜಯ್‌ಗೆ ಸೌಥ್‌ ಸುಂದರಿ ರೆಬಾ ಜಾನ್‌ ಜೋಡಿಯಾಗಿ ಅಭಿನಯಿಸಿದ್ದಾರೆ.

ಹಿರಿಯ ನಟಿ ಉಮಾಶ್ರೀ, ಶ್ರುತಿ, ಪ್ರಮೋದ್‌ ಶೆಟ್ಟಿ, ಅನು ಪ್ರಭಾಕರ್‌, ರವಿಶಂಕ ‌ರ್‌, ವೈನಿಧಿ, ಅಚ್ಯುತ್‌ ಕುಮಾರ್‌, ರಾಜೇಶ್‌ ನಟರಂಗ ಸೇರಿದಂತೆ ಹಲವು ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ”ದಯವಿಟ್ಟು ಗಮನಿಸಿ’ ಚಿತ್ರವನ್ನು ನಿರ್ದೇಶಿಸಿದ್ದ ರೋಹಿತ್‌ ಪದಕಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಐಫೋನ್ 13 ನಲ್ಲಿ ಇರಲಿದೆಯಂತೆ ಫೇಸ್ ರೆಕಗ್ನೈಸಿಂಗ್ ಫೀಚರ್ : ಮಾಹಿತಿ ಇಲ್ಲಿದೆ

ಇತ್ತೀಚೆಗೆ ಧನಂಜಯ ಬರ್ತ್‌ಡೇ ಹಿನ್ನೆಲೆಯಲ್ಲಿ ಅವರ ಹಲವು ಸಿನಿಮಾಗಳ ಫ ‌ಸ್ಟ್‌ಲುಕ್‌ ಕೂಡ ರಿಲೀಸ್‌ ಆಗಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next