ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ, ಕೊಡುಗೈ ದಾನಿ ರತನ್ ಟಾಟಾ ಅವರು ಕುತೂಹಲಕಾರಿ ವಿಷಯ, ಪ್ರಮುಖ ವ್ಯಕ್ತಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸದಾ ಸಕ್ರಿಯರಾಗಿದ್ದು, ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ:ದರೋಡೆಕೋರರಿಗೆ ಶಸ್ತ್ರಾಸ್ತ್ರ ; ದೆಹಲಿಯಲ್ಲಿ 15 ಪಿಸ್ತೂಲ್‌ಗಳ ಸಹಿತ ವ್ಯಕ್ತಿ ಬಂಧನ
ತಮ್ಮ ಸುದೀರ್ಘ ಜೀವನಾನುಭವದ ಕೆಲವು ಸ್ಫೂರ್ತಿದಾಯಕ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ Instagramನಲ್ಲಿ ಲಕ್ಷಾಂತರ Followersಗಳನ್ನು ಹೊಂದಿರುವ ರತನ್ ಟಾಟಾ ಅವರು Instagramನಲ್ಲಿ ಕೇವಲ ಕೇವಲ ಒಂದೇ ಒಂದು ಖಾತೆಯನ್ನು ಫಾಲೋ ಮಾಡುತ್ತಿದ್ದು, ಟ್ವೀಟರ್ ನಲ್ಲಿ 27 ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದಿದೆಯೇ?
Related Articles
ರತನ್ ಟಾಟಾ ಅವರ Instagram ಖಾತೆ 8.5 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ. ಆದರೆ ರತನ್ ಟಾಟಾ ಮಾತ್ರ ಕೇವಲ ಒಂದೇ ಒಂದು ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.
ಅರೇ ಅದ್ಯಾವ ಖಾತೆ ಎಂಬುದನ್ನು ಊಹಿಸಬಲ್ಲಿರಾ? ರತನ್ ಟಾಟಾ ಅವರು Instagramನಲ್ಲಿ ಫಾಲೋ ಮಾಡುತ್ತಿರುವ ಏಕೈಕ ಖಾತೆ “Tata Trusts”. 1892ರಲ್ಲಿ ಭಾರತೀಯರ ಉನ್ನತ ಶಿಕ್ಷಣಕ್ಕೆ ನೆರವಾಗುವಂತೆ ಟಾಟಾ ಗ್ರೂಪ್ ಸಂಸ್ಥಾಪಕ ಜಮ್ ಶೆಟ್ ಜಿ ಟಾಟಾ ಅವರು ಟಾಟಾ ಟ್ರಸ್ಟ್ ಸ್ಥಾಪಿಸಿದ್ದರು. ಇದು ಉನ್ನತ ಶಿಕ್ಷಣಕ್ಕೆ ಉತ್ತೇಜನ, ಉನ್ನತ ಸಂಶೋಧನೆಗೆ ಒತ್ತುವ ನೀಡುವುದಕ್ಕಾಗಿ ಇರುವ ಟಾಟಾ ಟ್ರಸ್ಟ್ ಖಾತೆಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.