ಸಿದ್ದಾಪುರ: ರಾಷ್ಟ್ರಧ್ವಜ ರಾಷ್ಟ್ರದ ಜನತೆಗೆ ಅತ್ಯಂತ ಶ್ರೇಷ್ಠ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅದಕ್ಕೊಂದು ನೀತಿ ಸಂಹಿತೆ ಇದ್ದು ಅದನ್ನು ಅತ್ಯಂತ ಶಿಸ್ತುಬದ್ಧವಾಗಿ ಪಾಲಿಸಲೇಬೇಕು. ರಾಷ್ಟ್ರಧ್ವಜಕ್ಕೆ ನೀಡಬೇಕಾದ ಪರಿಕಲ್ಪನೆಯನ್ನು ಎಲ್ಲರೂ ಹೊಂದಿರಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ| ರವಿ ಹೆಗಡೆ ಹೂವಿನಮನೆ ಹೇಳಿದರು.
ಅವರು ಸಿದ್ದಾಪುರ ಲಯನ್ಸ್ ಕ್ಲಬ್ ವತಿಯಿಂದ ಲಯನ್ ಜಿ.ಜಿ. ಹೆಗಡೆ ಬಾಳಗೋಡ ಲಯನ್ಸ್ ಡಿಸ್ಟ್ರಿಕ್ಟ್ ಚೇರ್ಮನ್ ಸಂಕಲನಗೊಳಿಸಿದ ರಾಷ್ಟ್ರಧ್ವಜ ನೀತಿ ಸಂಹಿತೆ ಎಂಬ ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ ಅಧ್ಯಕ್ಷತೆವಹಿಸಿದ್ದರು. ಲಯನ್ಸ್ ಜಿಲ್ಲಾ ಚೇರ್ಮನ್ ಸತೀಶ ಗೌಡರ್ ಹೆಗ್ಗೋಡ್ಮನೆ, ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಜಿಲ್ಲಾ ಚೇರ್ಮನ್ ಡಾ| ಎಂ.ಪಿ. ಶೆಟ್ಟಿ ಉಪಸ್ಥಿತರಿದ್ದರು.
ಎಂ.ಆರ್. ಪಾಟೀಲ, ಆರ್.ಎಂ. ಪಾಟೀಲ, ನಾಗರಾಜ ದೋಶೆಟ್ಟಿ, ಡಾ| ಪ್ರಭಾಶಂಕರ ಹೆಗಡೆ, ಶ್ಯಾಮಲಾ ಹೆಗಡೆ ಹೂವಿನ್ಮನೆ, ನಾಗರಾಜ ಪಾಟೀಲ, ಎ.ಜಿ. ನಾಯ್ಕ, ನಾಗರಾಜ ಶೇಟ, ರಾಘವೇಂದ್ರ ಭಟ್ಟ ಕಲ್ಲಾಳ ಉಪಸ್ಥಿತರಿದ್ದರು.
ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಜಿ. ಜೋಷಿ ವಂದಿಸಿದರು.