Advertisement

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

12:15 AM Jul 05, 2024 | Team Udayavani |

ಮೂಡಬಿದಿರೆ: ಭಾರತ ಗೌರವ ರಾಷ್ಟ್ರಸಂತ ಗಣಾಚಾರ್ಯ ಬಾಲ ಬ್ರಹ್ಮಚಾರಿ 108 ಗುಣಧಾರಿ, ವಿರಾಗ ಸಾಗರ ಜೀ ದಿಗಂಬರ ಮುನಿಮಹಾರಾಜ್‌ ಅವರು ಮಹಾರಾಷ್ಟ್ರದ ಔರಂಗಾಬಾದ್‌ನ ಜಲಾ°ದ ಸಿಂಧಖೇಡಾದ ದೇವಮೂರ್ತಿ ಗ್ರಾಮದಲ್ಲಿ ಗುರುವಾರ ಮುಂಜಾನೆ 2.30ಕ್ಕೆ ಸಲ್ಲಖನ ವ್ರತಪೂರ್ವಕ ಸಮಾಧಿಮರಣವನೈದಿದರು.

Advertisement

ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಮೂಲತಃ ಮಧ್ಯಪ್ರದೇಶದವರಾಗಿದ್ದರು.350ಕ್ಕೂ ಹೆಚ್ಚಿನ ಮಂದಿಗೆ ಜೈನ ಧರ್ಮದ ಆಚಾರ್ಯ ಪದವಿ, ದಿಗಂಬರ ಮುನಿ, ಗಣನೀ ಮಾತಾಜಿ, ಆಯಿìಕಾ ಮಾತಾಜಿ ಪದವಿ, ಕ್ಷುಲ್ಲಕ ದೀಕ್ಷೆ ಹಾಗೂ ಬ್ರಹ್ಮಚರ್ಯ ದೀಕ್ಷೆ ನೀಡಿದ್ದು ನಾಡಿನಾದ್ಯಂತ ಧರ್ಮಪ್ರಭಾವನೆಗೈದಿದ್ದರು. ಜೈನ ಆಗಮ ಶಾಸ್ತ್ರಗಳ ಬಗ್ಗೆ ವಿಮರ್ಶೆ ಸಹಿತ 150ಕ್ಕೂ ಅಧಿ ಕ ಕೃತಿ ರಚಿಸಿದ್ದರು.

ಅವರ ಪೂರ್ವಾಶ್ರಮದ ಪಿತ, ಕಪೂರ್‌ಚಂದ್‌ ಜೈನ್‌ ಅವರೂ ಮುನಿದೀಕ್ಷೆ ಪಡೆದಿದ್ದು, ತಾಯಿ ಸಂಘದಲ್ಲಿ ಆಯಿìಕಾ ಮಾತಾಜಿ ಪದವಿ ಸ್ವೀಕರಿಸಿದ್ದರು.

ಮೂಡುಬಿದಿರೆಯಲ್ಲಿ
2005ರಲ್ಲಿ ಜೈನಕಾಶಿ ಮೂಡುಬಿದಿರೆಯಲ್ಲಿ ಅವರು 30 ಮಂದಿ ಸಾಧು ಸಂತರ ಸಹಿತ 60 ಮಂದಿ ಪಿಂಛಿಧಾರಿ ಮುನಿಸಂಘದೊಂದಿಗೆ ಚಾತುರ್ಮಾಸ್ಯ ಕೈಗೊಂಡು ಧರ್ಮಪ್ರಭಾವನೆಗೈದಿದ್ದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಚಾತುರ್ಮಾಸ್ಯ ಸಮಿತಿ ಕಾರ್ಯನಿರ್ವಹಿಸಿದ್ದು, ಅರೆಮಾದನಹಳ್ಳಿ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ ಸಹಿತ ನಾಡಿನ ಗಣ್ಯ ಮಠಾಧಿಪತಿಗಳು ವಿರಾಗಸಾಗರರನ್ನು ಭೇಟಿ ಮಾಡಿದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಎಚ್‌.ಕೆ. ಪಾಟೀಲ್‌ ಮೊದಲಾದವರು ಮೂಡುಬಿದಿರೆಗಾಗಮಿಸಿ ವಿರಾಗ ಸಾಗರರ ಆಶೀರ್ವಾದ ಸ್ವೀಕರಿಸಿದ್ದರು.

ಸದ್ಗತಿ ಪ್ರಾರ್ಥನೆ: ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಅವರು “ವಿರಾಗ ಸಾಗರರು ತೀವ್ರ ವ್ರತ ನಿಯಮ ಹೊಂದಿರುವ ಶ್ರಾವಕ ಶ್ರಾವಿಕೆಯರಿಗೆ ದೀಕ್ಷೆ ನೀಡಿ ಆತ್ಮ ಕಲ್ಯಾಣದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದ್ದರು, ಉತ್ತಮ ಧರ್ಮ ಬೋಧಕರಾಗಿದ್ದರು’ ಎಂದು ಸ್ಮರಿಸಿಕೊಂಡು ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next