Advertisement

ರಶ್ಮಿಕಾ ಪೊಗರಿಲ್ಲದ ಹುಡುಗಿ!

05:33 AM Feb 20, 2019 | |

ಕೆಲವೊಂದು ಚಿತ್ರಗಳು, ಅದರ ವಾತಾವರಣ, ಆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ನಡುವೆ ಬಿಡಿಸಲಾಗದ ಭಾವನಾತ್ಮಕ ಸಂಬಂಧಗಳಿಗೆ ಕಾರಣವಾಗುತ್ತವೆ. ಹುಡುಕುತ್ತ ಹೋದರೆ, ಚಿತ್ರಗಳು ಭಾಂದವ್ಯ ಬೆಳೆಸಿದ ಇಂತಹ ಹತ್ತಾರು ಉದಾಹರಣೆಗಳು ಚಿತ್ರರಂಗದಲ್ಲಿ ಸಿಗುತ್ತವೆ. ಈಗ ಯಾಕೆ ಈ ವಿಷಯ ಅಂತೀರಾ? ಅದನ್ನು ಹೇಳಲು ಒಂದು ಬಲವಾದ ಕಾರಣವಿದೆ. 

Advertisement

ಕನ್ನಡದ ಹಿರಿಯ ನಟ ದಿವಂಗತ ಅಶ್ವಥ್‌ ಅವರ ಪುತ್ರ ಶಂಕರ್‌ ಅಶ್ವಥ್‌ ಕೂಡ ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೂರಾರು ಪಾತ್ರಗಳಿಗೆ ಬಣ್ಣ ಹಚ್ಚಿರುವ ಶಂಕರ್‌ ಅಶ್ವಥ್‌, ಸದ್ಯ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 

ಕಳೆದ ಕೆಲ ದಿನಗಳಿಂದ “ಪೊಗರು’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರದಿಂದ ನಡೆಯುತ್ತಿದೆ. ಈ ಚಿತ್ರೀಕರಣದಲ್ಲಿ, ಧ್ರುವ ಸರ್ಜಾ, ನಾಯಕಿ ರಶ್ಮಿಕಾ ಮಂದಣ್ಣ, ಶಂಕರ್‌ ಅಶ್ವಥ್‌, ಜಗಪತಿ ಬಾಬು ಸೇರಿದಂತೆ ಅನೇಕ ಕಲಾವಿದರು ಭಾಗವಹಿಸುತ್ತಿದ್ದಾರೆ. ಶೂಟಿಂಗ್‌ ಸಮಯದಲ್ಲೇ ನಟ ಶಂಕರ್‌ ಅಶ್ವಥ್‌ ಅವರಿಗೆ ಕತ್ತು ನೋವು ಕಾಣಿಸಿಕೊಂಡಿದೆ.

ಆಗ ಸ್ಥಳದಲ್ಲಿಯೇ ಇದ್ದ ನಟಿ ರಶ್ಮಿಕಾ ಮಂದಣ್ಣ, ಹಿಂದೆ ಮುಂದೆ ನೋಡದೇ ಮಗಳಂತೆ ಕತ್ತನ್ನು ಒತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಪ್ರೀತಿ-ಮಮತೆಗೆ ಮನಸೋತ ಶಂಕರ್‌ ಅಶ್ವಥ್‌, ಸೋಷಿಯಲ್‌ ಮೀಡಿಯಾದಲ್ಲಿ, “ನಾನು ಚಲನಚಿತ್ರರಂಗ ಪ್ರವೇಶ ಮಾಡಿ ಮೂರು ದಶಕಗಳಾದರೂ ಈ ಅನುಭವ ಎಂದು ಹೊಂದಿರಲಿಲ್ಲ.

ಒಬ್ಬ ಪ್ರಖ್ಯಾತ ನಾಯಕ ನಟಿ ನನ್ನನ್ನು ತಂದೆಯಂತೆ ಕಂಡಿದ್ದಲ್ಲದೆ, ಕತ್ತುಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಆಕೆ ಮಗಳೇ ಸರಿ. ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ, ಧನ್ಯವಾದಗಳು ರಶ್ಮಿಕಾ ಮಂದಣ್ಣ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 

Advertisement

ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರೋ ರಶ್ಮಿಕಾ, “ಒಂದು ಫ‌ಲಾಪೇಕ್ಷೆಯಿಲ್ಲದೆ ಮಾಡಿದ ಒಂದು ಸಣ್ಣ ಕೆಲಸ ನಿಮಗೆ ದೊಡ್ಡ ರೀತಿಯಲ್ಲಿ ಸಪ್ರೈಸ್‌ ನೀಡುತ್ತೆ. ಒಬ್ಬ ಅಪ್ಪ ಮಾತ್ರ ಪುಟ್ಟ ಮಗಳಿಗೆ ಸಪ್ರೈಸ್‌ ಕೊಟ್ಟು ಆನಂದ ಭಾಷ್ಪ ಬರುವಂತೆ ಮಾಡಬಲ್ಲರು. ನೀವು ಈಗ ಹಾಗೆ ನಂಗೆ ಮಾಡಿದ್ದೀರಾ. ನಂಗೇ ಇದೇ ರೀತಿಯ ಪ್ರೀತಿ ಬೇಕಿರೋದು. ಲವ್‌ ಯೂ ಅಪ್ಪಾ!’ ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next