Advertisement

ವಿಜಯ್‌ ದೇವರಕೊಂಡ ಜೊತೆಗೆ ರಶ್ಮಿಕಾ

10:38 AM Sep 07, 2017 | |

ರಶ್ಮಿಕಾ ಮಂದಣ್ಣ ತೆಲುಗು ಚಿತ್ರಗಳಲ್ಲಿ ನಟಿಸುವ ಸುದ್ದಿಯೊಂದು ಕೆಲವು ಸಮಯದಿಂದ ಇತ್ತು. ಆದರೆ, ಇಲ್ಲೇ ಪುನೀತ್‌ ರಾಜಕುಮಾರ್‌ ಅಭಿನಯದ “ಅಂಜನಿಪುತ್ರ’ ಮತ್ತು ಗಣೇಶ್‌ ಅಭಿನಯದ “ಚಮಕ್‌’ ಚಿತ್ರಗಳಲ್ಲಿ ಬಿಝಿಯಾಗಿದ್ದ ರಶ್ಮಿಕಾ ಇದೀಗ ತೆಲುಗಿಗೆ ಹೊರಟು ನಿಂತಿದ್ದಾರೆ. ವಿಜಯ್‌ ದೇವರಕೊಂಡ ಅಭಿನಯದ ಹೊಸ ಚಿತ್ರವೊಂದರಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಈ ವಿಷಯವನ್ನು ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ.

Advertisement

“ಅರ್ಜುನ್‌ ರೆಡ್ಡಿ’ ಎಂಬ ಚಿತ್ರದಲ್ಲಿ ನಟಿಸಿ ಸಖತ್‌ ಜನಪ್ರಿಯರಾಗಿರುವ ವಿಜಯ್‌ ದೇವರಕೊಂಡ, ಇದೀಗ ತೆಲುಗಿನಲ್ಲಿ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ವಿಶೇಷವೆಂದರೆ, ಈ ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್‌ ನಿರ್ಮಿಸುತ್ತಿರುವುದು.

“ಮಗಧೀರ’ ಸೇರಿದಂತೆ ತೆಲುಗಿನಲ್ಲಿ ಹಲವು ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ಅಲ್ಲು ಅರವಿಂದ್‌, ಕನ್ನಡದಲ್ಲಿ “ಮಾಂಗಲ್ಯಂ ತಂತು ನಾನೇನ’ ಮತ್ತು ರಾಕ್‌ಲೈನ್‌ ವೆಂಕಟೇಶ್‌ ಜೊತೆಗೆ ಸೇರಿಕೊಂಡು “ಸುಂದರಾಂಗ ಜಾಣ’ ಎನ್ನುವ ಚಿತ್ರವನ್ನೂ ನಿರ್ಮಿಸಿದ್ದಾರೆ. ಈಗ ಅವರು ನಿರ್ಮಿಸುತ್ತಿರುವ ಹೊಸ ತೆಲುಗು ಚಿತ್ರವೊಂದರಲ್ಲಿ ವಿಜಯ್‌ ಮತ್ತು ರಶ್ಮಿಕಾ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪರಶುರಾಮ್‌ ಎನ್ನುವವರು ನಿರ್ಮಿಸುತ್ತಿರುವ ಈ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next