ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿರುವ “ಮಿಷನ್ ಮಜ್ನು ‘ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿಕೊಟ್ಟಂತಾಗಿದೆ. ಈಗ ರಶ್ಮಿಕಾ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಶುಕ್ರವಾರ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಶ್ಮಿಕಾ ಕ್ಲಾಪ್ ಬೋರ್ಡ್ ಹಿಡಿದುಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಬಾಲಿವುಡ್‌ನ ಮೊದಲ ಸಿನಿಮಾದ ಖುಷಿಯನ್ನು ಹಂಚಿಕೊಂಡಿದ್ದಾರೆ.
ಇತ್ತ ಕಡೆ ರಶ್ಮಿಕಾ ತೆಲುಗು ಚಿತ್ರರಂಗದಲ್ಲೂ ಬಿಝಿ. ಸದ್ಯ ಅಲ್ಲು ಅರ್ಜುನ್ ನಟನೆಯ ಪುಷ್ಪದಲ್ಲಿ ನಟಿಸುತ್ತಿದ್ದಾರೆ. ಯಾವುದೇ ಕಲೆಯಾಗಿರಲಿ, ಕಲಾವಿದನಾಗಿರಲಿ ಅದಕ್ಕೆ ಭಾಷೆಯ ಚೌಕಟ್ಟು ಇರಬಾರದು ಅನ್ನೋದು ರಶ್ಮಿಕಾ ನಿಲುವು.
ಇದನ್ನೂ ಓದಿ:ಚಿತ್ರ ವಿಮರ್ಶೆ: ರಿಷಭವಾಹನ ‘ಹೀರೋ’ ವೈಭವ!
ಈ ಬಗ್ಗೆ ಮಾತನಾಡುವ ರಶ್ಮಿಕಾ, “ಸಿನಿಮಾಕ್ಕೆ ಯಾವುದೇ ಭಾಷೆಯ ಗಡಿ ಇರುವುದಿಲ್ಲ. ಹಾಗೆಯೇ ಸಿನಿಮಾ ಮಾಡುವವರು ಮತ್ತು ಸಿನಿಮಾದಲ್ಲಿ ಅಭಿನಯಿಸುವವರಿಗೂ ಕೂಡ ಭಾಷೆಯ ಗಡಿ ಇರುವುದಿಲ್ಲ. ನಟರಾದವರಿಗೆ ಯಾವುದೇ ಭಾಷೆಯ ಹಂಗಿರಬಾರದು. ಅದನ್ನು ಇಟ್ಟುಕೊಳ್ಳಬಾರದು ಅನ್ನೋದು ನನ್ನ ಅಭಿಪ್ರಾಯ. ನಾನೊಬ್ಬಳು ನಟಿ ಅಷ್ಟೇ. ಹಾಗಾಗಿ ನನಗೆ ಯಾವುದೇ ಭಾಷೆಯ ಚೌಕಟ್ಟು ಇಲ್ಲ. ನಾನು ಯಾವುದೋ ಒಂದು ಭಾಷೆಗೆ ಸೀಮಿತವಾಗಿ ಗುರುತಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಒಳ್ಳೆಯ ಸಬೆjಕ್ಟ್ ಸಿಕ್ಕಾಗ ಕನ್ನಡ, ತೆಲುಗು, ತಮಿಳು ಸಿನಿಮಾಗಳನ್ನು ಮಾಡಿದ್ದೇನೆ. ಇನ್ನೂ ಒಳ್ಳೆಯ ಸಬೆjಕ್ಟ್ಗಳು ಸಿಕ್ಕರೆ ಇಂಗ್ಲಿಷ್, ಫ್ರೆಂಚ್, ಸ್ಪಾನಿಷ್ ಸಿನಿಮಾ ಬೇಕಾದ್ರೂ ಮಾಡ್ತೀನಿ. ಈ ವಿಷಯದಲ್ಲಿ ನನಗೆ ಯಾವುದೇ ಕಟ್ಟುಪಾಡುಗಳಿಲ್ಲ’ ಎನ್ನುತ್ತಾರೆ