Advertisement

Rashmika mandanna ಡೀಪ್‌ ಫೇಕ್‌ ಕ್ಲಿಪ್; ಪ್ರತಿಕ್ರಿಯೆ ನೀಡಿದ ವಿಡಿಯೋದಲ್ಲಿರುವ ಯುವತಿ

01:27 PM Nov 07, 2023 | Team Udayavani |

ಮುಂಬಯಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕಳೆದ ಎರಡು – ಮೂರು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮುಖವನ್ನಿಟ್ಟುಕೊಂಡು ಮಾಡಿರುವ ಡೀಪ್‌ ಫೇಕ್‌ ವಿಡಿಯೋ.

Advertisement

ಎಐ ತಂತ್ರಜ್ಞಾನ ಬಳಸಿಕೊಂಡು ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮಾರ್ಫ್ ಮಾಡಿ ಬೇರೊಂದು ವಿಡಿಯೋಗೆ ಜೋಡಿಸಲಾಗಿದೆ. ಈ ವಿಡಿಯೋದಲ್ಲಿರುವುದು ಬಿಟ್ರಿಷ್‌ – ಇಂಡಿಯನ್ ಸೋಶಿಯಲ್‌ ಮೀಡಿಯಾ ತಾರೆ ಝಾರಾ ಪಟೇಲ್.

ಲಿಫ್ಟ್‌ ನೊಳಗೆ ಕಪ್ಪು ಉಡುಗೆಯಲ್ಲಿ ಝಾರಾ ಪಟೇಲ್ ಬರುತ್ತಾರೆ. ಅರೆಬೆತ್ತಲೆಯಾಗಿ ಝಾರಾ ಪಟೇಲ್ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಗೊತ್ತಾಗದ ರೀತಿಯಲ್ಲಿ ರಶ್ಮಿಕಾ ಅವರ ಮುಖವನ್ನು‌ ಜೋಡಿಸಿ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಲಾಗಿದೆ.

ಈ ಬಗ್ಗೆ ಕಾನೂನು ಕ್ರಮಕಗೊಳ್ಳುವಂತೆ ಕಲಾವಿದರಾದ ಅಮಿತಾಭ್‌, ನಾಗ ಚೈತನ್ಯ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ. ಸ್ವತಃ ರಶ್ಮಿಕಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಮೂಲ ವಿಡಿಯೋದಲ್ಲಿರುವ ಯುವತಿ ಝಾರಾ ಪಟೇಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Advertisement

“ಯಾರೋ ನನ್ನ ದೇಹ ಮತ್ತು ಬಾಲಿವುಡ್‌ನ ಜನಪ್ರಿಯ ನಟಿಯ ಮುಖವನ್ನು ಬಳಸಿಕೊಂಡು ಡೀಪ್‌ಫೇಕ್ ವೀಡಿಯೊವನ್ನು ಕ್ರಿಯೇಟ್‌ ಮಾಡಿದ್ದಾರೆ. ಈ ವಿಡಿಯೋಗೂ ನನ್ನ ಒಳ್ಳಗೊಳ್ಳುವಿಕೆ ಇಲ್ಲ. ಏನಾಗಿದೆ ಅದರ ಬಗ್ಗೆ ನನಗೆ ಆಘಾತವಾಗಿದೆ ಮತ್ತು ಇದರಿಂದ ಮನಸ್ಸು ವಿಚಲಿತಗೊಂಡಿದೆ. ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ನಾನು ಚಿಂತಿಸುತ್ತೇನೆ. ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ವೇಳೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ದಯವಿಟ್ಟು ನೀವು ಏನು ನೋಡಿದರೂ ಒಮ್ಮೆ ಪರಿಶೀಲಿಸಿ,ಇಂಟರ್‌ ನೆಟ್‌ ಕಾಣಸಿಗುವುದು ಎಲ್ಲವೂ ನಿಜವಲ್ಲ” ಎಂದು ಝಾರಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಬ್ರಿಟಿಷ್‌ –  ಇಂಡಿಯನ್‌ ಸೋಶಿಯಲ್‌ ಮೀಡಿಯಾ ತಾರೆ ಆಗಿರುವ ಝಾರಾ ಪಟೇಲ್‌ ಅವರಿಗೆ 400,000 ಫಾಲೋವರ್ಸ್‌ ಇದ್ದಾರೆ. ಇವರು ವೃತ್ತಿಯಲ್ಲಿ ಡೇಟಾ ಇಂಜಿನಿಯರ್‌ ಆಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next