Advertisement

Video: ಬಾಲಿವುಡ್‌ ನಟ ರಣ್ಬೀರ್‌ ಕಪೂರ್‌ಗೆ ಕನ್ನಡ ಕಲಿಸಿದ ರಶ್ಮಿಕಾ ಮಂದಣ್ಣ

01:26 PM Nov 22, 2023 | Team Udayavani |

ಮುಂಬಯಿ: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಬಹು ನಿರೀಕ್ಷಿತ ಬಾಲಿವುಡ್‌ ಸಿನಿಮಾ ʼಅನಿಮಲ್‌ʼ ರಿಲೀಸ್‌ ಗೆ ರೆಡಿಯಾಗಿದೆ. ರಿಲೀಸ್‌ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.

Advertisement

ಈಗಾಗಲೇ ಟೀಸರ್‌ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ಸಂದೀಪ್‌ ವಂಗಾ ಅವರ ʼಅನಿಮಲ್‌ʼ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ. ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಡೊಂದರಲ್ಲಿ ಅವರು ರಣ್ಭೀರ್‌ ಜೊತೆ ಲಿಪ್‌ ಲಾಕ್‌ ಮಾಡಿಕೊಂಡಿರುವುದು ಬಿಟೌನ್‌ ವಲಯದ ಇತ್ತೀಚೆಗಿನ ವೈರಲ್‌ ಟಾಪಿಕ್‌ ಆಗಿದೆ.

ಗುರುವಾರ(ನ.23 ರಂದು) ʼಅನಿಮಲ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಟಿವಿ ಕಾರ್ಯಕ್ರಮವೊಂದಕ್ಕೆ ಸಿನಿಮಾ ಪ್ರಚಾರ ಮಾಡಲು ತೆರಳಿದೆ. ರಣ್ಬೀರ್‌ ಹಾಗೂ ರಶ್ಮಿಕಾ ಅವರು ʼಇಂಡಿಯನ್‌ ಐಡಲ್‌ -14ʼ ಶೋಗೆ ಸಿನಿಮಾ ಪ್ರಚಾರ ಮಾಡಲು ತೆರಳಿದ ವೇಳೆ ಪಾಪರಾಜಿ( ಬಿಟೌನ್‌ ಸಿನಿ ಮೀಡಿಯಾ)  ಎದುರಿಗೆ ಸಿಕ್ಕಿದ್ದಾರೆ.

“ಏನು ನಮ್ಮ ಡಾಕ್ಯುಮೆಂಟರಿ ಮಾಡ್ತಾ ಇದ್ದೀರಾ” ಎಂದು ರಣ್ಬೀರ್‌ ಹೇಳಿದ್ದಾರೆ. ಇದಾದ ಬಳಿಕ ಪಾಪರಾಜಿಯೊಬ್ಬರು ಕನ್ನಡದಲ್ಲಿ ಏನಾದ್ರು ಮಾತನಾಡಿ ಎಂದಿದ್ದಾರೆ. ಇದಕ್ಕೆ ರಶ್ಮಿಕಾ “ಎಲ್ಲರಿಗೂ ನಮಸ್ಕಾರ” ಎಂದಿದ್ದಾರೆ. ಇದಾದ ನಂತರ “ಹೇಗಿದ್ದೀರಾ, ಎಲ್ಲರಿಗೂ ನಮಸ್ಕಾರ” ಎಂದು ರಶ್ಮಿಕಾ ರಣ್ಬೀರ್‌ ಅವರಿಗೆ ಕನ್ನಡ ಕಲಿಸಿದ್ದಾರೆ. ರಣ್ಬೀರ್‌ ಕೂಡ ಕನ್ನಡದಲ್ಲೇ ಮಾತನಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ʼಅನಿಮಲ್‌ʼ ಡಿ.1 ರಂದು ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ರಣ್ಬೀರ್‌, ರಶ್ಮಿಕಾ ಜೊತೆ ಬಾಬಿ ಡಿಯೋಲ್‌, ಅನಿಲ್‌ ಕಪೂರ್‌ ಮುಂತಾದವರು ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next