Advertisement

ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ವಿಮಾನ ಹತ್ತಿದ ರಶ್ಮಿಕಾ

11:49 AM Nov 24, 2021 | Team Udayavani |

ನಟಿ ರಶ್ಮಿಕಾ ತಾವು ಯುಎಸ್ಎ ಗೆ ತೆರಳಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಏರ್ ಟಿಕೆಟ್ ಮತ್ತು ಪಾಸ್ ಪೋರ್ಟ್ ಕೈಲಿ ಹಿಡಿದಿರುವ ಫೋಟೋ ಶೇರ್ ಮಾಡಿರುವ ನಟಿ, ಇದೀಗ ನಿಮ್ಮಿಂದ ನಾನು ದೂರ ಹೋಗುತ್ತಿದ್ದೇನೆ. ಆದ್ರೆ ಆದಷ್ಟು ಬೇಕು ವಾಪಸ್ಸಾಗುತ್ತೇನೆ ಎಂದಿದ್ದಾರೆ.

Advertisement

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಒಂದನ್ನು ಮಾಡುತ್ತಿದ್ದು, ಶೂಟಿಂಗ್ ಕಾರಣದಿಂದ USA ಗೆ ತೆರಳಿದ್ದಾರೆ ಎನ್ನಲಾಗಿದೆ. ಹೌದು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾ ಮಾಡುತ್ತಿದ್ದಾರೆ.

ಈ ಪೋಸ್ಟ್ ಶೇರ್ ಮಾಡಿದ ಕೆಲವು ಸಮಯದ ಬಳಿ ವಿಮಾನದಲ್ಲಿರುವ ತಮ್ಮ ಸೆಲ್ಫಿ ಫೋಟೋವನ್ನು ಶೇರ್ ಮಾಡಿದ ನಟಿ, ‘ನಾನೀಗ ಎಲ್ಲಿದ್ದೇನೆ ಎಂದು ಹೇಳಿ ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.

Advertisement

ಆದ್ರೆ ತಾವು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ರಶ್ಮಿಕಾ ಹೇಳಿಕೊಂಡಿಲ್ಲ. ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲು ತೆರಳುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next