Advertisement

ಹಿಜಾಬ್‌ ಲುಕ್‌ನಲ್ಲಿ ರಶ್ಮಿಕಾ

01:05 PM Apr 06, 2022 | Team Udayavani |

ನಟಿ ರಶ್ಮಿಕಾ ಮಂದಣ್ಣ ಹಿಜಾಬ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ.

Advertisement

ಅಂದಹಾಗೆ, ರಶ್ಮಿಕಾ ಮಂದಣ್ಣ ಹೀಗೆ ಕಾಣಿಸಿಕೊಂಡಿರೋದು ತಮ್ಮ ಹೊಸ ಸಿನಿಮಾಕ್ಕಾಗಿ. ಏ.05 ರಶ್ಮಿಕಾ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಹೊಸ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಇದರಲ್ಲಿ ರಶ್ಮಿಕಾ ಹಿಜಾಬ್‌ ಧರಿಸಿ ಸೀರಿಯಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ಅವರು ಆಫ್ರೀನ್‌ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಕುರಿತು ಅವರ ಹುಟ್ಟುಹಬ್ಬದ ದಿನ ಚಿತ್ರತಂಡ ಸ್ವಾಗತ ಕೋರಿದೆ. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಮಲಯಾಳಂನ ಸ್ಟಾರ್‌ ನಟ ದುಲ್ಖರ್ ಸಲ್ಮಾನ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ರಶ್ಮಿಕಾ ಪಾತ್ರ ಸಖತ್‌ ಕುತೂಹಲ ಕೆರಳಿಸಿದೆ. ಇನ್ನು, ರಶ್ಮಿಕಾ ಬೇರೆ ಬೇರೆ ಭಾಷೆಗಳಲ್ಲಿ ಬಿಝಿಯಾಗಿದ್ದು, ಸದ್ಯ ಅವರ “ಪುಷ್ಪ-2′ ಕೆಲಸಗಳು ನಡೆಯುತ್ತಿದೆ. ಇದರ ಜೊತೆಗೆ ಹಿಂದಿಯ “ಮಿಷನ್‌ ಮಜ್ನು’ ಹಾಗೂ “ಗುಡ್‌ ಬೈ’ ಚಿತ್ರಗಳಲ್ಲೂ ಬಿಝಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next