Advertisement

ದೇವರಕೊಂಡ ಜತೆ ಡಿನ್ನರ್‍ಗೆ ಹಾಜರಾದ ನಟಿ ರಶ್ಮಿಕಾ ಮಂದಣ್ಣ

07:13 PM Mar 26, 2021 | Team Udayavani |

ಮುಂಬೈ : ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜತೆಯಾಗಿ ಡಿನ್ನರ್‍ ಗೆ ಹಾಜರಾಗಿದ್ದಾರೆ.

Advertisement

ಸದ್ಯ ತಮ್ಮ ಪ್ರತ್ಯೇಕ ಸಿನಿಮಾಗಳ ಶೂಟಿಂಗ್ ನಿಮಿತ್ತ ದೇವರಕೊಂಡ ಹಾಗೂ ರಶ್ಮಿಕಾ ಮುಂಬೈನಲ್ಲಿದ್ದಾರೆ. ಸಿನಿಮಾಗಳ ಬ್ಯುಝಿ ಶೂಟಿಂಗ್ ಶೆಡ್ಯೂಲ್ಡ್ ನಡುವೆಯೂ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ. ಈ ತಾರೆಯರು ಡಿನ್ನರ್ ಮುಗಿಸಿಕೊಂಡು ರೆಸ್ಟೋರಂಟ್‍ನಿಂದ ಹೊರ ಬರುತ್ತಿದ್ದ ಫೋಟೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಟಾಲಿವುಡ್‍ನಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಜತೆ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ.

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ಈ ಚಿತ್ರ ಎಲ್ಲೆಡೆ ಅಮೋಘ ಪ್ರದರ್ಶನ ಕಾಣುವ ಮೂಲಕ ಈ ತಾರಾ ಜೋಡಿಗೆ ದೊಡ್ಡ ಹೆಸರು ತಂದು ಕೊಟ್ಟಿತು. ನಂತರ ಇವರು ಜತೆಯಾಗಿ ನಟಿಸಿರುವ ಡಿಯರ್ ಕಾಮ್ರೇಡ್ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ.

ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳ ಬಳಿಕ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಜತೆಯಾಗಿ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಆದರೆ, ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದು, ಸಮಯ ಸಿಕ್ಕಾಗ ಪರಸ್ಪರ ಭೇಟಿಯಾಗುತ್ತಾರೆ.

Advertisement

ವಿಜಯ್ ದೇವರಕೊಂಡು ಹಾಗೂ ರಶ್ಮಿಕಾ ಅವರ ಸಿನಿಮಾಗಳ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದೆ. ಈ ಹಿನ್ನೆಲೆ ಈ ತಾರೆಯರು ಭೇಟಿಯಾಗಿ ಡಿನ್ನರ್ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next