Advertisement

ರಶ್ಮಿಕಾ ಮತ್ತೆ “ಲಿಪ್‌ಲಾಕ್‌’

05:48 AM Mar 18, 2019 | |

ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬಿಝಿಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ರಶ್ಮಿಕಾ ನಟಿಸಿರುವ “ಗೀತಾ ಗೋವಿಂದಂ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಜೊತೆಗೆ ಸಿನಿಮಾ ಬಿಡುಗಡೆಗೂ ಮುನ್ನವೇ ಲೀಕ್‌ ಆಗಿದ್ದ ನಾಯಕ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಲಿಪ್‌ಲಾಕ್‌ ದೃಶ್ಯ ದೊಡ್ಡ ಸಂಚಲನಕ್ಕೆ ಕಾರಣವಾಯಿತು.

Advertisement

ಈಗ ಮತ್ತೆ ಅದೇ ಜೋಡಿ ತೆರೆಮೇಲೆ ಬರಲು ರೆಡಿಯಾಗಿದೆ. ಈ ಬಾರಿ “ಡಿಯರ್‌ ಕಾಮ್ರೇಡ್‌’ ಮೂಲಕ. “ಡಿಯರ್‌ ಕಾಮ್ರೇಡ್‌’ನಲ್ಲಿ  ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ನಟಿಸಿದ್ದು, ಈಗ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಮೂಲಕ ರಶ್ಮಿಕಾ ಮತ್ತೂಮ್ಮೆ ಜೋರು ಸುದ್ದಿಗೆ ಕಾರಣರಾಗಿದ್ದಾರೆ. ಅದಕ್ಕೆ ಕಾರಣ ಲಿಪ್‌ಲಾಕ್‌ ದೃಶ್ಯ.

ಹೌದು, ಚಿತ್ರದ ಟೀಸರ್‌ನಲ್ಲಿ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಲಿಪ್‌ಲಾಕ್‌ ದೃಶ್ಯವಿದ್ದು, ಮತ್ತೆ ಚರ್ಚೆಗೆ ಕಾರಣವಾಗಿದೆ. ತಮ್ಮ ನೆಚ್ಚಿನ ಪದೇ ಪದೇ ಲಿಪ್‌ಲಾಕ್‌ ಮೂಲಕ ಸುದ್ದಿಯಾಗುತ್ತಿರುವುದು ರಶ್ಮಿಕಾ ಅಭಿಮಾನಿಗಳಿಗೆ ಬೇಸರ ತಂದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನ ಅವರ ಅಭಿಮಾನಿಗಳು ಕೂಡಾ ಈ ಬಗ್ಗೆ ಬೇಸರಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯೊಬ್ಬ, “ಲಿಪ್‌ಲಾಕ್‌ ನೋಡಿ ಬೇಜಾರಾಯಿತು. ಸಾರಿ, ಇನ್ನು ಮುಂದೆ ನಾನು ನಿಮ್ಮ ಅಭಿಮಾನಿಯಲ್ಲ, ಐ ಹೇಟ್‌ ಯು’ ಎಂದರೆ, ಮತ್ತೂಬ್ಬರು, “ಯಾರನ್ನು ಉರಿಸಲು ಈ ತರಹ ಕಿಸ್‌ ಮಾಡ್ತೀರಿ’ ಎಂದಿದ್ದಾರೆ. ಇನ್ನೊಬ್ಬ ಅಭಿಮಾನಿ, “ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಒಳ್ಳೆಯ ವರ್ತನೆಯೊಂದಿಗೆ ಚಿತ್ರರಂಗದಲ್ಲಿ ಮುಂದುವರೆಯಿರಿ’ ಎಂದಿದ್ದಾರೆ.

ಸಾಕಷ್ಟು ಮಂದಿ ಅಭಿಮಾನಿಗಳು ಮತ್ತೆ ಮತ್ತೆ ರಶ್ಮಿಕಾ ಲಿಪ್‌ಲಾಕ್‌ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಡಿಯರ್‌ ಕಾಮ್ರೇಡ್‌’ ಚಿತ್ರ ಏಕಕಾಲಕ್ಕೆ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ನಾಲ್ಕು ಭಾಷೆಯಲ್ಲೂ ಟೀಸರ್‌ ಬಿಡುಗಡೆಯಾಗಿದೆ. ಚಿತ್ರ ಮೇ 31 ರಂದು ತೆರೆಕಾಣಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next