Advertisement

ರಶ್ಮಿ ದುನಿಯಾ ಬದಲಿಸುತ್ತಾನಾ “ಜಗ್ಗಿ ಜಗನ್ನಾಥ್‌’

09:02 AM Feb 20, 2020 | Lakshmi GovindaRaj |

ಇತ್ತೀಚೆಗಷ್ಟೆ ಸ್ಪರ್ಧಿಯಾಗಿ “ಬಿಗ್‌ಬಾಸ್‌’ ಮನೆಯೊಳಗೆ ಕಾಣಿಸಿಕೊಂಡಿದ್ದ ನಟಿ ದುನಿಯಾ ರಶ್ಮಿ ಅಭಿನಯದ ಚಿತ್ರವೊಂದು ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜಗ್ಗಿ ಜಗನ್ನಾಥ್‌’ ಸುಮಾರು ನಾಲ್ಕು ವರ್ಷದ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರ ಅಂತಿಮವಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ತೆರೆಗೆ ಬರುವ ತಯಾರಿಯಲ್ಲಿದೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬಂದಿರುವ “ಜಗ್ಗಿ ಜಗನ್ನಾಥ್‌’ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು/ಎ’ ಸರ್ಟಿಫಿಕೆಟ್‌ ನೀಡಿ ಬಿಡುಗಡೆಗೆ ಅಸ್ತು ಎಂದಿದೆ.

Advertisement

ಇನ್ನು “ಜಗ್ಗಿ ಜಗನ್ನಾಥ್‌’ ಚಿತ್ರದಲ್ಲಿ ದುನಿಯಾ ರಶ್ಮಿಗೆ ನಾಯಕನಾಗಿ ಲಿಖಿತ್‌ ರಾಜ್‌ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಾಯಿಕುಮಾರ್‌, ತಬಲಾ ನಾಣಿ, ಪದ್ಮಜಾ ರಾವ್‌, ಲಯೇಂದ್ರ ಕೋಕಿಲ, ಮೈಕೋ ನಾಗರಾಜ್‌, ಪೆಟ್ರೋಲ್‌ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್‌, ಮೋಹನ್‌ ಜುನೇಜ, ವಾಣಿಶ್ರೀ, ಗುರುರಾಜ ಹೊಸಕೋಟೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಲವ್‌ ಆ್ಯಕ್ಷನ್‌ ಮತ್ತು ಅಂಡ್‌ವರ್ಲ್ಡ್ ಕತೆಯನ್ನು ಹೊಂದಿರುವ “ಜಗ್ಗಿ ಜಗನ್ನಾಥ್‌’ ಚಿತ್ರವನ್ನು “ಶ್ರೀಮೈಲಾರ ಲಿಂಗೇಶ್ವರ ಮೂವೀಸ್‌’ ಬ್ಯಾನರ್‌ನಲ್ಲಿ ಹೆಚ್‌. ಜಯರಾಜು, ಜಿ. ಶಾರದಾ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎ. ಎಂ. ನೀಲ್‌ ಸಂಗೀತ ಸಂಯೋಜಿಸಿದ್ದು, ಯೋಗರಾಜ ಭಟ್‌, ಜಯಂತ್‌ ಕಾಯ್ಕಿಣಿ, ವಿಜಯ್‌ ವಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ತಾಣಗಳಲ್ಲಿ ಶೂಟಿಂಗ್‌ ಮಾಡಲಾಗಿದೆ.

ಚಿತ್ರಕ್ಕೆ ರೇಣುಕುಮಾರ್‌ ಛಾಯಾಗ್ರಹಣ, ಶ್ರೀನಿವಾಸ್‌ ಬಿ ಬಾಬು ಸಂಕಲನವಿದೆ. ಒಟ್ಟಾರೆ ನಾಲ್ಕು ವರ್ಷದ ನಂತರ ತೆರೆಗೆ ಬರುವ ಉತ್ಸಾಹದಲ್ಲಿರುವ “ಜಗ್ಗಿ ಜಗನ್ನಾಥ್‌’ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾನೆ. ಬಿಗ್‌ ಸ್ಕ್ರೀನ್‌ನಲ್ಲಿ ಕಂ ಬ್ಯಾಕ್‌ ಆಗುವ ನಿರೀಕ್ಷೆಯಲ್ಲಿರುವ ದುನಿಯಾ ರಶ್ಮಿಗೆ “ಜಗ್ಗಿ ಜಗನ್ನಾಥ್‌’ ಕೈಹಿಡಿಯುತ್ತಾನಾ ಅನ್ನೋದಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next