ಮಲಬಾರಿಯ ಆರು ಸಹಚರರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣಭಟ್, ಕಾಕತಿವೇಸ್‌ದ ಮುಜಫರ ಮಹ್ಮದ ಶೇಖ (24), ಅಶೋಕ ನಗರದ ಇಮಿ¤ಯಾಜ್ ಅಬ್ದುಲ್ ಅಜೀಜ್ ದಲಾಯತ್ (36), ಮಹಾಂತೇಶ ನಗರದ ನವೀದ ಮುನೀರ ಅಹ್ಮದ ಖಾಜಿ (37), ವಂಟಮೂರಿ ಕಾಲೋನಿಯ ಸಫìರಾಜ್ ಸುಬಾನಮಿಯಾ ಜಮಾದಾರ (37), ಜಿಪಂ ಮಾಜಿ ಅಧ್ಯಕ್ಷ ನಜೀರ ನದಾಫ ಹಾಗೂ ಉತ್ತರ ಕನ್ನಡ ಜಿಲ್ಲೆ ರಾಮನಗರ ಜಗಲಪೇಟ್ ನಿವಾಸಿ ಜತಿನ್ ಅರ್ಜುನ ಕದಂ (31)
ಬಂಧಿತರು. ಆರೋಪಿಗಳಿಗೆ ಭೂಗತ ಪಾತಕಿಗಳ ಸಂಪರ್ಕ ಇರುವುದರಿಂದ ಹೆಚ್ಚಿನ ತನಿಖೆಗೆ ಪೊಲೀಸ್ ಅಧಿಕಾರಿಗಳ 3 ತಂಡ ರಚಿಸಲಾಗಿದೆ ಎಂದು ಹೇಳಿದರು.
Advertisement
ಮಹಾಂತೇಶ ನಗರದ ಹುಣಸೆ ಹಣ್ಣಿನ ವ್ಯಾಪಾರಿ ಸುರೇಶ ರೇಡೆಕರ ಅವರೊಂದಿಗೆ ಸ್ನೇಹ ಹೊಂದಿದ್ದ ಜಿಪಂ ಮಾಜಿ ಅಧ್ಯಕ್ಷ ನಜೀರ ನದಾಫ್, ಸುರೇಶ ಬಳಿ ಸಾಕಷ್ಟು ಹಣವಿರುವುದಾಗಿ ರಶೀದ್ ಮಲಬಾರಿಗೆ ತಿಳಿಸಿದ್ದ. ಸುರೇಶ ರೇಡೆಕರ ಅವರಿಂದ ಹಣ ದೋಚಲು ಉಪಾಯ ಮಾಡಿದ ತಂಡ ಅವರ ಮಗ ರೋಹನ್‌ನನ್ನು ಅಪಹರಿಸಿ, ಗೋವಾ ಮಾರ್ಗದ ಚೋರ್ಲಾ ಘಾಟ್‌ನಲ್ಲಿ ಕೊಲೆಗೈದಿದ್ದರು. ಪ್ರಕರಣ ಸಂಬಂಧ ಮುಜಫರ್‌ನನ್ನು ವಿಚಾರಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಪಾತಕಿ ಮಲಬಾರಿ ಮತ್ತು ಸಲ್ಮಾನ್ ಜತೆ ಸೇರಿ ಅಷಾ#ಕ್ ಖತೀಬ ಮತ್ತು ಇಮಿ¤ಯಾಜ್ ದಲಾಯತ, ರಿಯಲ್ ಎಸ್ಟೇಟ್ ಉದ್ಯಮಿ ಶರೀಫ ಯರಗಟ್ಟಿ ಎಂಬುವರಿಗೆ ಬೆದರಿಕೆ ಹಾಕಿ ಹಣ ಲೂಟಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದರು.
ಬೆದರಿಕೆ ಹಾಕಿದ್ದಲ್ಲದೆ, 2 ಕೋಟಿ ರೂ.ಗೆ ಬೇಡಿಕೆ ಇಟ್ಟ ಕುರಿತು ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾದ ಆಶೀಸ್ ರಂಜನ್ ಮತ್ತು ಕಾರವಾರದ ಅಯಾಜ ಅಹಮ್ಮದ್ ಎಂಬುವರನ್ನು ಅಪಹರಿಸಿ, ಕೊಲೆ ಮಾಡಿ, ಮೃತ ದೇಹಗಳನ್ನು ಯಲ್ಲಾಪುರ ಹಾಗೂ ಅಂಕೋಲಾ ಬಳಿ ಎಸೆದು ಪರಾರಿಯಾಗಿರುವುದಾಗಿ ತಿಳಿಸಿದರು. ತೋಟದ ಮನೆಯಲ್ಲಿ ಆಶ್ರಯ
ಜಿಪಂ ಮಾಜಿ ಅಧ್ಯಕ್ಷ ನಜೀರ ನದಾಫ್ ಅವರ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಪಾತಕಿ ರಶೀದ ಮಲಬಾರಿ ಆಶ್ರಯ ಪಡೆದಿದ್ದು ಬೆಳಕಿಗೆ ಬಂದಿದೆ. 2 ವರ್ಷಗಳಿಂದ ಅಲ್ಲಿ ತನ್ನ ಕುಟುಂಬದ ಜತೆ ವಾಸ ವಾಗಿದ್ದ ಮಲಬಾರಿ ಅಲ್ಲಿಂದಲೇ ಅಪರಾಧ ಚಟುವಟಿಕೆ ಮುಂದುವರಿಸಿದ್ದ. ಈತನಿಗೆ ನಜೀರ ನದಾಫ್,
ನಗರದ ಮೂವರನ್ನು ಪರಿಚಯ ಮಾಡಿಸಿದ್ದ. ಈ ಪ್ರಕರಣ ತನಿಖಾ ಹಂತದಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣಭಟ್ ಹೇಳಿದರು.