Advertisement

Afghanistan ತಂಡಕ್ಕೆ ಮರಳಿದ ರಶೀದ್‌ ಖಾನ್‌

11:50 PM Jun 18, 2023 | Team Udayavani |

ಕಾಬೂಲ್‌: ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು ಅನುಭವಿ ಬೌಲರ್‌ ರಶೀದ್‌ ಖಾನ್‌ ತಂಡಕ್ಕೆ ಮರಳಿದ್ದಾರೆ. ಈ ಸರಣಿ ಜುಲೈ 5ರಿಂದ ಆರಂಭವಾಗಲಿದೆ.

Advertisement

ಶ್ರೀಲಂಕಾ ವಿರುದ್ಧ ಈ ಹಿಂದೆ ಆಡಿದ ಏಕದಿನ ಸರಣಿ ವೇಳೆ ಅಫ್ಘಾನಿಸ್ತಾನ ತಂಡದಲ್ಲಿದ್ದ ನೂರ್‌ ಅಹ್ಮದ್‌ ಅವರನ್ನು ಕೈಬಿಡಲಾಗಿದೆ.

ಬಿಗ್‌ ಬಾಶ್‌ ಕೂಟದಲ್ಲಿ ಉತ್ತಮ ನಿರ್ವಹಣೆ ನೀಡಿದ್ದ ಲೆಗ್‌ಸ್ಪಿನ್ನರ್‌ ಇಜರುಲ್ಲಾಕ್‌ ನವೀದ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜಿಯಾ ಉರ್‌ ರೆಹಮಾನ್‌, ವಫಾದರ್‌ ಮೊಮಂದ್‌, ಮೊಹಮ್ಮದ್‌ ಸಲೀಮ್‌ ಮತ್ತು ಸಯ್ಯದ್‌ ಶಿರ್ಜಾದ್‌ ಇನ್ನಿತರ ಹೊಸ ಮುಖಗಳು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next