Advertisement

ಅಫ್ಘಾನ್‌ ತಂಡಕ್ಕೆ ರಶೀದ್‌ ನಾಯಕ

12:21 AM Jul 13, 2019 | Sriram |

ಹೊಸದಿಲ್ಲಿ: ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವ ರನ್ನು ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅವರು 3 ಮಾದರಿಯ ಕ್ರಿಕೆಟಿಗೆ ತಂಡದ ನಾಯಕರಾಗಿರುತ್ತಾರೆ. ಮಾಜಿ ನಾಯಕ ಅಸYರ್‌ ಅಫ್ಘಾನ್‌ ಅವರನ್ನು ಉಪನಾಯಕರನ್ನಾಗಿ ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ ಆಯ್ಕೆ ಮಾಡಲಾಗಿದೆ.

Advertisement

ರಶೀದ್‌ ಅವರನ್ನು ಎಲ್ಲ ಮಾದರಿಗೆ ನಾಯಕರನ್ನಾಗಿ ನೇಮಕ ಮಾಡುವ ಮೂಲಕ ಕ್ರಿಕೆಟ್‌ ಮಂಡಳಿ ಪ್ರತ್ಯೇಕ ನಾಯಕರ ಆಯ್ಕೆಗೆ ಅಂತ್ಯ ಹಾಡಿದೆ. ಈ ಮೊದಲು ಏಕದಿನಕ್ಕೆ ಗುಲ್ಬದಿನ್‌ ನೈಬ್‌, ಟಿ20ಕ್ಕೆ ರಶೀದ್‌ ಮತ್ತು ಟೆಸ್ಟ್‌ಗೆ ರಹಮತ್‌ ಶಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.

ಅಫ್ಘಾನಿಸ್ಥಾನ ತಂಡವು ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿತ್ತು. ಆಡಿದ ಎಲ್ಲ ಪಂದ್ಯಗಳಲ್ಲೂ ಸೋಲನ್ನು ಕಂಡಿತ್ತು. ಆದರೆ ಭಾರತ, ವೆಸ್ಟ್‌ ಇಂಡೀಸ್‌ ಮತ್ತು ಪಾಕಿಸ್ಥಾನ ವಿರುದ್ಧ ಗೆಲ್ಲಲು ತೀವ್ರ ಪೈಪೋಟಿ ನೀಡಿತ್ತು.


Advertisement

Udayavani is now on Telegram. Click here to join our channel and stay updated with the latest news.

Next