Advertisement

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

06:25 AM Dec 22, 2024 | Team Udayavani |

22-12-2024

Advertisement

ಮೇಷ: ರಜೆಯ ಆನಂದವನ್ನು ಪೂರ್ಣವಾಗಿ ಅನುಭವಿಸಲು ಪ್ರಯತ್ನಿಸಿ.  ದಿನವಿಡೀ ಸಾಂಸಾರಿಕ ಜವಾಬ್ದಾರಿ ನಿರ್ವಹಣೆ. ಸಾಮಾಜಿಕ ಕಾರ್ಯಗಳಿಗೆ ಗಮನ.  ಬಂಧುವರ್ಗದವರಿಂದ ಶುಭ ಸಮಾಚಾರ. ಸೇವಾ ಕಾರ್ಯಕ್ರಮಗಳಲ್ಲಿ ಭಾಗಿ.

ವೃಷಭ: ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಗೆ ಪ್ರಯತ್ನ. ಸಹೋದ್ಯೋಗಿಗಳೊಡನೆ ಕೌಟುಂಬಿಕ ಸಮ್ಮಿಲನ. ವಿದೇಶದಲ್ಲಿರುವ ಬಂಧು ಗಳೊಡನೆ ದೂರವಾಣಿ ಸಂಭಾಷಣೆ. ಕುತಂತ್ರಿ ಹಿತಶತ್ರುಗಳಿಂದ ಸುಖಕ್ಕೆ ಹಾನಿ.

ಮಿಥುನ: ಕಾಲ್ಪನಿಕ ಬಾಧೆಗಳನ್ನು ನಿರ್ಲಕ್ಷಿಸಿ. ಅಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆ. ಧಾರ್ಮಿಕ ನಾಯಕರ ಭೇಟಿ. ಉದ್ಯೋಗಾನ್ವೇಷಿಗಳಿಗೆ ಶುಭಕಾಲ. ರಾತ್ರಿಯಲ್ಲಿ ವಾಹನ ಚಾಲನೆ ಮಾಡದಿರಿ. ಕುಲದೇವತಾ ಸನ್ನಿಧಾನಕ್ಕೆ ಭೇಟಿ.

ಕರ್ಕಾಟಕ:  ಊರಿನ ಅಭಿವೃದ್ಧಿ  ಕಾರ್ಯಗಳಲ್ಲಿ ಭಾಗಿ. ಸಿವಿಲ್‌ ಎಂಜಿನಿಯರರಿಗೆ ಕೆಲಸದ ಒತ್ತಡ. ವಸ್ತ್ರ ಹಾಗೂ ಖಾದ್ಯವಸ್ತು ವ್ಯಾಪಾರಿಗಳಿಗೆ ಲಾಭ. ಊರಿನ ದೇವಾಲಯಕ್ಕೆ ಭೇಟಿ. ಒಡೆದ ಸಂಸಾರ ಒಗ್ಗೂಡಿಸಲು ಸಹಾಯ.

Advertisement

ಸಿಂಹ: ಸಹಚರರನ್ನು ಕ್ರಿಯೆಯಲ್ಲಿ ತೊಡಗಿಸುವ ಹುಮ್ಮಸ್ಸು. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಹಿರಿಯರ , ಗೃಹಿಣಿಯರ ಆರೋಗ್ಯ ಉತ್ತಮ. ಕೇಟರಿಂಗ್‌ ವ್ಯವಹಾರ ಸುಧಾರಣೆಗೆ ಮಾರ್ಗದರ್ಶನ.

ಕನ್ಯಾ: ಮನಸ್ಥೈರ್ಯ ಕೆಡಿಸುವವರ ಕಾಟ. ಉದ್ಯೋಗ ಬದಲಾವಣೆ ಸಂಭವ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಹಿರಿಯರನ್ನು ಸಂತುಷ್ಟಗೊಳಿಸುವ ಕ್ರಮಗಳು.

ತುಲಾ:  ಹಿರಿಯರ ಉತ್ತೇಜನದಿಂದ ಕ್ರಿಯಾರಂಭ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆ. ಜ್ಞಾನಿಗಳಿಂದ ಜಿಜ್ಞಾಸೆಗೆ ಸಮಾಧಾನ. ವಿನಾಯಕನ ಕ್ಷೇತ್ರ ಸಂದರ್ಶನ.

ವೃಶ್ಚಿಕ: ಆಪ್ತವರ್ಗದ ಹರ್ಷಾಚರಣೆಯಲ್ಲಿ ಭಾಗಿ. ಬಂಧುವರ್ಗದವರಿಗೆ ಸಕಾಲಿಕ ಸಹಾಯ. ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ನವವಿವಾಹಿತ ಜೋಡಿಯ ಆಗಮನ.

ಧನು: ನಿರಂತರ ಕ್ರಿಯೆಯಿಂದ ಆನಂದ. ಪರೋಪಕಾರ ಗುಣದಿಂದ ಸರ್ವಜನರ ಗೌರವ. ಒಡೆದ ಮನಸ್ಸುಗಳನ್ನು ಬೆಸೆದ ತೃಪ್ತಿ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಭೇಟಿ, ನೊಂದವರಿಗೆ ಸಾಂತ್ವನ ಹೇಳಿ ಆನಂದ.

ಮಕರ: ಉದ್ಯೋಗದ ಜಂಜಾಟಗಳಿಗೆ ವಿರಾಮ. ಹೊಸ ಉದ್ಯೋಗ ಅರಸುವಿಕೆ ಯಲ್ಲಿ ಮುನ್ನಡೆ. ಅಂಚೆ ಮೂಲಕ ಶಿಕ್ಷಣ ಪ್ರಗತಿಯಲ್ಲಿ. ತಾಯಿಯ ಕಡೆಯ ಬಂಧುಗಳ ಆಗಮನ. ವಸ್ತ್ರ, ಆಭರಣ, ಶೋಕಿವಸ್ತು ವ್ಯಾಪಾರಿಗಳಿಗೆ ಲಾಭ.

ಕುಂಭ: ಮಿತ್ರರ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಸಹಾಯ. ಬರಬೇಕಾದ ಬಾಕಿ ಕೈಸೇರಿದ ಸಮಾಧಾನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಸಾಮಾಜಿಕ ಕಾರ್ಯಕರ್ತರಿಗೆ ಸಮ್ಮಾನ. ಅವಿವಾಹಿತರಿಗೆ ವಿವಾಹ ಯೋಗ.

ಮೀನ: ಸಂತೃಪ್ತಿಯೊಂದಿಗೆ ವಿರಾಮ ಆಚರಣೆ. ಹಿರಿಯರ ಸಮ್ಮಾನದಿಂದ ಸಂತೃಪ್ತಿ. ಕೃಷಿಭೂಮಿಯಲ್ಲಿ ಕೈಗೊಂಡ ಪ್ರಯೋಗ ಪ್ರಗತಿಯಲ್ಲಿ. ಕೌಟುಂಬಿಕ ವ್ಯವಹಾರಕ್ಕಾಗಿ ಪ್ರಯಾಣ. ಅಸಹಾಯಕರ ಸಹಾಯದ ಕರೆಗೆ ಸ್ಪಂದನ. ಮಕ್ಕಳ ಓದಿನ ಬಗ್ಗೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next