Advertisement

ಸೂರ್ಯನ ಅಪರೂಪದ ಮಾಹಿತಿ ಲಭ್ಯ

12:15 AM Jun 24, 2021 | Team Udayavani |

ಹೊಸದಿಲ್ಲಿ: “ಚಂದ್ರಯಾನ-2′ ಯೋಜನೆಯಡಿ ಕಳುಹಿಸಲಾಗಿದ್ದ ಪರಿಕರವೊಂದು ಸೂರ್ಯನ ಕರೊನಾ ಹಾಗೂ ಹೀಲಿಯೋ ಫಿಕ್ಸ್‌ ಬಗ್ಗೆ ಅಪರೂಪದ ಮಾಹಿತಿಗಳನ್ನು ಕಳುಹಿಸಿರುವುದಾಗಿ ಇಸ್ರೋ ತಿಳಿಸಿದೆ.

Advertisement

ಬರಿಗಣ್ಣಿಗೆ ಕಾಣುವ ಸೂರ್ಯನ ವಲಯದಿಂದ ಆಚೆಗೆ ನೂರಾರು ಕಿ.ಮೀ.ವರೆಗೆ ಸೂರ್ಯನ ಶಾಖ, ಬೆಳಕು ಇರುವ ಪ್ರಭಾವಳಿ ಇದ್ದು, ಸೂರ್ಯನ ಮೇಲ್ಮೆ„ಯಲ್ಲಿ ಇರುವ ಶಾಖಕ್ಕಿಂತ ಹೆಚ್ಚಿನ ಶಾಖ ಅಲ್ಲಿರುತ್ತದೆ. ಅದರ ಅಧ್ಯಯನದಲ್ಲಿ ಹಲವಾರು ವರ್ಷಗಳಿಂದ ವಿಜ್ಞಾನಿಗಳು ತೊಡಗಿದ್ದಾರೆ.

ಇದಲ್ಲದೆ ಸೌರಮಂಡಲದ ವಿವಿಧ ಗ್ರಹಗಳ ಮೇಲೆ ಸೂರ್ಯನ ಪರಿಣಾಮಗಳನ್ನು ಅಧ್ಯ ಯನ ಮಾಡುವ ಶಾಸ್ತ್ರವನ್ನು ಹೀಲಿಯೋ ಫಿಸಿಕ್ಸ್‌ ಎಂದು ಕರೆಯಲಾಗುತ್ತದೆ. ಜೀವಿಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ಸೂರ್ಯನ ಬೆಳಕಿನಲ್ಲಿ ಯಾವ ಶಕ್ತಿಯಿದೆ? ಯಾವ ಶಕ್ತಿಯಿಂದ ನಿಸರ್ಗದ ಮೇಲೆ ಸೂರ್ಯನ ಬೆಳಕು ಪರಿಣಾಮ ಬೀರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಲಾಗುತ್ತದೆ. ಇವೆರಡೂ ವಿಚಾರಗಳಿಗೆ ಸಂಬಂಧಿಸಿ ಮಹತ್ವದ ವಿಷಯಗಳನ್ನು ಚಂದ್ರ ಯಾನ-2ರ ಪರಿಕರವೊಂದು ಕಳುಹಿಸಿದೆ.

ಸನ್‌ ಸ್ಪಾಟ್‌ಗಳ ಅಧ್ಯಯನ: ಸದಾ ಧಗಧಗಿಸುವ ಸೂರ್ಯನ ಗೋಳದಲ್ಲೂ ಕತ್ತಲೆಯಿಂದ ಕೂಡಿದ ಕಪ್ಪಾಗಿ ಕಾಣುವ ಕೆಲವು ಜಾಗಗಳಿವೆ. ಅವನ್ನು ಸನ್‌ ಸ್ಪಾಟ್‌ಗಳೆಂದು ಕರೆಯುತ್ತಾರೆ. ಅಲ್ಲಿ ಅಯಸ್ಕಾಂತೀಯ ಶಕ್ತಿ ಹೆಚ್ಚಾಗಿರುತ್ತದೆ. ಇವುಗಳಿಂದಲೇ ಸೂರ್ಯನ ಕರೊನಾ ವಲಯ ದಲ್ಲಿ ಹೆಚ್ಚು ಉಷ್ಣಾಂಶ ಸೃಷ್ಟಿಯಾಗುತ್ತದೆ ಎಂಬ ತರ್ಕಕ್ಕೆ ಬರಲಾಗಿದೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next