Advertisement

Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ಬಂಧನ

12:15 PM Sep 18, 2024 | Team Udayavani |

ಮ್ಯಾನ್ಹ್ಯಾಟನ್ : ಅಮೆರಿಕದ ಖ್ಯಾತ ಹಿಪ್-ಹಾಪ್‌ ಸ್ಟಾರ್ ದಿಡ್ಡಿ ಯನ್ನು ಲೈಂಗಿಕ ದಂಧೆ ಮತ್ತು ಮಹಿಳೆಯರ ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದು, ಕೋರ್ಟ್ ಅವರಿಗೆ ಜಾಮೀನು ನಿರಾಕರಿಸಿದೆ.

Advertisement

54 ರ ಹರೆಯದ ಕೊಂಬ್ಸ್, ಹಿಪ್-ಹಾಪ್‌ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದು , ಕಳೆದ ಕೆಲವು ವರ್ಷದಲ್ಲಿ ಕೇಳಿಬಂದ ಆರೋಪಗಳ ಪ್ರವಾಹ ಉದ್ಯಮದಿಂದ ದೂರ ಸರಿಯುವಂತೆ ಮಾಡಿತ್ತು.

ಫೆಡರಲ್ ಅಧಿಕಾರಿಗಳು ಸೋಮವಾರ(ಸೆ16) ತಡರಾತ್ರಿ ಮ್ಯಾನ್‌ಹ್ಯಾಟನ್‌ನಲ್ಲಿ ಬಂಧಿಸಿದ್ದಾರೆ. ಲೈಂಗಿಕ ಕಳ್ಳಸಾಗಣೆ ತನಿಖೆ ಆರಂಭಿಸಿದ ಸುಮಾರು ಆರು ತಿಂಗಳ ನಂತರ ಲಾಸ್ ಏಂಜಲೀಸ್ ಮತ್ತು ಮಿಯಾಮಿಯಲ್ಲಿರುವ ಅವರ ಐಷಾರಾಮಿ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಸೀನ್ ಲವ್ ಕೊಂಬ್ಸ್ ಅವರು ”ಡಿಡ್ಡಿ” ಎಂದೇ ಜನಪ್ರಿಯವಾಗಿದ್ದ. ಐವರು ಮಕ್ಕಳೂ ಇದ್ದಾರೆ.

ಲೈಂಗಿಕ ಕಿರುಕುಳಕ್ಕೆ ನೀಡಿದ್ದಾರೆ ಎಂದು ಹಲವರು ಮೊಕದ್ದಮೆ ಹೂಡಿದ್ದು, ಆರೋಪಗಳನ್ನು ಕೋಂಬ್ಸ್ ನಿರಾಕರಿಸಿದ್ದಾರೆ. ವಕೀಲ ಮಾರ್ಕ್ ಅಗ್ನಿಫಿಲೊ ಮಂಗಳವಾರ ಬೆಳಗ್ಗೆ ನ್ಯಾಯಾಲಯದ ಹೊರಗೆ ಕೋಂಬ್ಸ್ ತಪ್ಪಿತಸ್ಥರಲ್ಲ ಎಂದು ಹೇಳಿದ್ದು, ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಹೋರಾಡುವುದಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next