Advertisement
ಈರುಳ್ಳಿ ಬೆಲೆ 15 ದಿನಗಳಲ್ಲಿ 8ರಿಂದ 10 ರೂ. ಹೆಚ್ಚಳವಾಗಿದೆ. ಬೀನ್ಸ್ ಮತ್ತು ಬೆಂಡೆ ತಲಾ 10 ರೂ. ತುಟ್ಟಿಯಾಗಿವೆ. ಕರಾವಳಿಯಲ್ಲಿ 2020 ಜೂನ್ ತಿಂಗಳಲ್ಲಿ ಇದ್ದ ಬೆಲೆಗಳಿಗೆ ಹೋಲಿಸಿದರೆ 7 ತಿಂಗಳಲ್ಲಿ ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ಗಮನಾರ್ಹ ಏರಿಕೆಯಾಗಿದೆ.
Related Articles
Advertisement
ತೆಂಗಿನ ಕಾಯಿ ಸಗಟು ಮಾರಾಟ ದರ 45 ರೂ. ಹಾಗೂ ರಿಟೇಲ್ ದರ 50 ರೂ. ಇದೆ. 1 ತಿಂಗಳಿಂದ ಇದೇ ದರ ಇದೆ.ಈ ವರ್ಷ ಫಸಲು ಕಡಿಮೆ. ಹಾಗಾಗಿ ಸ್ಥಳೀಯ ತೆಂಗಿನಕಾಯಿ ಶೇ. 50 ರಷ್ಟು ಕಡಿಮೆಯಾಗಿದೆ. ಬಯಲು ಸೀಮೆಯ ತೆಂಗಿನ ಕಾಯಿ ಆವಕ ಕೂಡ ಕಡಿಮೆಯಾಗಿದೆ. ಕೊರೊನಾ ಕಾರಣ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಇಲ್ಲದ ಕಾರಣ ದೇಗುಲಗಳಿಗೆ ತೆಂಗಿನ ಕಾಯಿ ಪೂರೈಕೆ ಕಡಿಮೆ ಆಗಿದ್ದರೂ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಸರಬರಾಜು ಸಾಕಷ್ಟಿಲ್ಲ. ಅಲ್ಲದೆ ಬೊಂಡಕ್ಕೆ ಬೆಲೆ ಜಾಸ್ತಿ ಇರುವುದರಿಂದ ಹೆಚ್ಚಿನ ತೆಂಗು ಬೆಳೆಗಾರರು ಕಾಯಿ ಆಗಲು ಬಿಡದೆ ಬೊಂಡಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ. ಹಾಗಾಗಿ ಕಾಯಿ ಬೆಲೆ ಏರಿಕೆ ಆಗಿರುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಪ್ರವೀಣ್ ಉದಯವಾಣಿಗೆ ತಿಳಿಸಿದ್ದಾರೆ.