Advertisement
ಜಿಲ್ಲೆಯಲ್ಲಿ ಅನೇಕ ಮರಗಳಲ್ಲಿ ಹುಣಸೆಕಾಯಿ ಬಿಡಿಸದೆ ಹಾಗೆಯೇ ಬಿಟ್ಟಿದ್ದಾರೆ. ದರ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರು ಹುಣಸೆಕಾಯನ್ನು ಸಂಗ್ರಹಿಸುತ್ತಿದ್ದಾರೆ. ಮಾರಕಟ್ಟೆಯಲ್ಲಿ ಟೊಮೊಟೋ ದರ ಗಗನಕ್ಕೇರುತ್ತಿದ್ದಂತೆ ಸಾರು ಮಾಡಲು ಹುಣಸೆಹಣ್ಣು ಇದೆ ಎಂದು ಹೆಣ್ಣುಮಕ್ಕಳು ಹೇಳುತ್ತಿದ್ದ ಮಾತು ಅದ್ಹೇಕೋ ಈ ಬಾರಿ ಹುಸಿಯಾದಂತೆ ಕಾಣಿಸುತ್ತಿದೆ. ಟೊಮೊಟೋ ಏರಿಕೆ ಇಳಿಯಂಗಿಲ್ಲ. ಹುಣಸೆಹಣ್ಣು ಏರಂಗಿಲ್ಲ ಎಂಬಂತಾಗಿದೆ ಸದ್ಯದ ಪರಿಸ್ಥಿತಿ.
Related Articles
Advertisement
ಬಯಲು ಸೀಮೆ ಜಿಲ್ಲೆಗಳ ರೈತರಿಗೆ ಹುಣಸೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಳೆದ ವರ್ಷ ಉತ್ತಮ ಮಳೆ ಆಗಿ ಫಸಲು ನಿರೀಕ್ಷೆಗೂ ಮೀರಿ ಬಂದಿದೆ. ಕೊಯ್ಲು ಮಾಡಿ ಹೊಟ್ಟು ತೆಗೆದು ಕಾಯಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಹುಣಸೆ ಕಡಿಮೆ ಬೆಲೆಗೆ ಮಾರಾಟ ಹಾಕುತ್ತಿದ್ದ ಕೂಲಿ ಸಾಗಾಟದ ವೆಚ್ಚ ಕೈಗೆ ಬರುತ್ತಿಲ್ಲ ಎಂದು ಹುಣಸೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡರು.
ಇದನ್ನೂ ಓದಿ: ವಾಟ್ಸ್‌ಆ್ಯಪ್ ಗೂ ಬರಲಿದೆ ಎಡಿಟ್ ಆಯ್ಕೆ
ಬೆಂಬಲ ಬೆಲೆ ನೀಡಲು ಒತ್ತಾಯ
ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾದರೆ ತಿಂಗಳಗಟ್ಟಲೇ ಕಾಯಬೇಕು. ಆದರೆ, ಬೆಲೆ ಕುಸಿತ ಕಂಡಾಗ ಸರ್ಕಾರ ರೈತರ ನೆರವಿಗೆ ಬರುವುದಿಲ್ಲ ಎಂದು ಬೆಳೆಗಾರರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಸರ್ಕಾರ ಹುಣಸೆ ಬೆಳೆಗಾರರ ನೆರವಿಗೆ ಧಾವಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಹುಣಸೆಹಣ್ಣನ್ನು ಮರದಿಂದ ಕಿತ್ತ ನಂತರ ಮೇಲ್ಭಾಗದ ತೊಗಟೆ ತೆಗೆದು ಬೀಜವನ್ನು ಹುಣಸೆಹಣ್ಣಿನಿಂದ ಬೇರ್ಪಡಿಸಬೇಕು. ವಾತಾವರಣ ತುಸು ಬಿಸಿಲಿನಿಂದ ಕೂಡಿದರೆ ಹಣ್ಣು ಪ್ರತ್ಯೇಕಿಸುವುದು ಸುಲಭ. ಆದರೆ, ಕಳೆದ ಒಂದು ತಿಂಗಳಿನಿಂದ ಎಡಬಿಡದೆ ಸುರಿದ ಮಳೆ ಕೂಡಾ ಹುಣಸೆ ಫಸಲು ಕೊಯ್ಯಲು ಅಡ್ಡಿ ಮಾಡಿತು. ತೇವಾಂಶವಿದ್ದರೆ ಹುಣಸೆಹಣ್ಣು ಕೈಗೆ ಅಂಟುತ್ತದೆ. ಹಾಗಾಗಿ, ರೈತರು ಮರದಿಂದ ಕೀಳುವುದೇ ಮರೆತರು. ಹುಣಸೆಹಣ್ಣು ಕೃಷಿಗೆ ಬರುತ್ತದೋ, ತೋಟಗಾರಿಕೆ ವ್ಯಾಪ್ತಿಗೋ ಎಂಬಿತ್ಯಾದಿ ಗೊಂದಲದಲ್ಲಿ ಇದ್ದಾರೆ ರೈತರು.
ದರ ಕುಸಿತ ಹೊರತು ಪಡಿಸಿದರೆ ಅಷ್ಟಾಗಿ ಬೇರೆ ಸಮಸ್ಯೆಗಳು ಹುಣಸೆಹಣ್ಣಿಗೆ ಬಾರದು. ಚಿಲ್ಲರೆ ಅಂಗಡಿಗಳಲ್ಲಿ ಒಂದು ಕೆ.ಜಿ. ಹುಣಸೆಹಣ್ಣಿಗೆ ಈ ಹಿಂದೆ ಅಂಗಡಿಗಳಲ್ಲಿ 180ರಿಂದ 200 ರೂ. ದರವಿದೆ. ಆದರೆ, ಇದರ ಅರ್ಧದಷ್ಟು ಹಳ್ಳಿಗಳಲ್ಲಿ ಬೆಲೆ ಕಟ್ಟುತ್ತಿಲ್ಲ. ಹಾಗಾಗಿ, ಮರದಿಂದ ಕೀಳದಿರು ವುದೇ ಒಳ್ಳೆಯದೆಂಬ ತೀರ್ಮಾನಕ್ಕೆ ರೈತರ ಬಂದಿದ್ದಾರೆ.
ಹುಣಸೆಹಣ್ಣು ದರ ಹೆಚ್ಚಾಗಿದ್ದಾಗ ರೈತರಲ್ಲಿ ಸಂತಸ ಇತ್ತು. ಇದೀಗ ಬೆಲೆ ಇಳಿಕೆಯಾಗಿರುವುದರಿಂದ ದಿಕ್ಕು ತೋಚದಂತಾಗಿದೆ. ಈಗ ಹದಿನೈದು ರೂ. ನೀಡಿದರೆ ಯಾವುದೇ ಉಪಯೋಗವಾಗುವುದಿಲ್ಲ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಹೆಚ್ಚಳ ಆಗಿರುವುದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. –ದೇವರಾಜ್, ರೈತ
ತುಮಕೂರು ಇತರೆ ಕಡೆಗಳಿಂದ ಹುಣಸೆಹಣ್ಣನ್ನು ಖರೀದಿಸಿ ಕೊಂಡು ವ್ಯಾಪಾರ ಮಾಡುತ್ತೇವೆ. ಈ ಹಿಂದೆ ಹುಣಸೆಹಣ್ಣಿಗೆ ಹೆಚ್ಚಿನ ಬೆಲೆ ಇತ್ತು. ದಿಢೀರ್ ಬೆಲೆ ಕುಸಿತ ಗೊಂಡಿದೆ. ಈ ಹಿಂದೆ 120 ರೂ.ಗೆ ಹುಣಸೆಹಣ್ಣನ್ನು ವ್ಯಾಪಾರ ಮಾಡ ಲಾಗುತ್ತಿತ್ತು. ಈಗ ಬೆಲೆ ಇಳಿಕೆ ಆಗಿದೆ. –ನಾಗರಾಜ್, ವರ್ತಕರು.
–ಎಸ್.ಮಹೇಶ್