Advertisement
ಹೊಸ ಮಾರುಕಟ್ಟೆ ನಿರ್ಮಾಣ ಹಿನ್ನೆಲೆ ಯಲ್ಲಿ ಹಳೆ ಮಾರುಕಟ್ಟೆಯನ್ನು ಕೆಡವಿ ತೆರವುಗೊಳಿಸುವ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದ್ದು, ಪರ್ಯಾಯವಾಗಿ ಮಾರಾಟಗಾರರಿಗೆ ತಾತ್ಕಾಲಿಕ ಮಾರು ಕಟ್ಟೆಯನ್ನು ಹತ್ತಿರದ ಬಸ್‌ನಿಲ್ದಾಣದ ಒಂದು ಭಾಗದಲ್ಲಿ ಸಿದ್ಧಗೊಳಿಸಲಾಗಿದೆ.
ಹಳೆಯ ಕಟ್ಟಡದಲ್ಲಿರುವ ವ್ಯಾಪಾರಿಗಳ ಅನುಕೂಲಕ್ಕಾಗಿ ಸುಮಾರು 1 ಕೋ.ರೂ. ವೆಚ್ಚದಲ್ಲಿ ಕೆಲವು ತಿಂಗಳ ಹಿಂದೆ ಆರಂಭಿಸಿದ್ದ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಮುಗಿದಿದೆ. ಹಳೆಯ ಮಾರುಕಟ್ಟೆಯಲ್ಲಿರುವವರು ತಾತ್ಕಾಲಿಕ ಮಾರುಕಟ್ಟೆಗೆ ತೆರಳುವಂತೆ ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿದೆ. ತತ್‌ಕ್ಷಣವೇ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರ ಆಗುವಂತೆ ವ್ಯಾಪಾರಿಗಳಿಗೆ ಪಾಲಿಕೆ ಸೂಚಿಸಿದೆ. ಹಳೆಮಾರುಕಟ್ಟೆಯಲ್ಲಿ ಒಟ್ಟು 98 ಅಂಗಡಿ ಮಳಿಗೆಗಳು ಮತ್ತು ಮಧ್ಯೆ ಮೀನು ಮಾರುಕಟ್ಟೆಯಿದೆ. ಅದಕ್ಕೆ ಪೂರಕವಾಗಿ ಹೊಸ ತಾತ್ಕಾಲಿಕ ಮಾರು ಕಟ್ಟೆಯಲ್ಲಿಯೂ ಪುಟ್ಟ ಗಾತ್ರದ 98 ಅಂಗಡಿ ಮಳಿಗೆಗಳನ್ನು ಮತ್ತು ಪ್ರತ್ಯೇಕ ಮೀನು ಮಾರುಕಟ್ಟೆ ನಿರ್ಮಿಸಲಾಗಿದೆ. 24 ವರ್ಷಗಳ ಹಳೆಯ ಮಾರುಕಟ್ಟೆ
ಕಂಕನಾಡಿಯ ಈಗಿನ ಮಾರುಕಟ್ಟೆಯು ಸುಮಾರು 24 ವರ್ಷಗಳ ಹಳೆಯದಾಗಿದೆ. ಇಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ವ್ಯಾಪಾರಿಗಳು, ಗ್ರಾಹಕರಿಗೆ ಅಗತ್ಯದ ವ್ಯವಸ್ಥೆಗಳು ಇಲ್ಲಿ ಸೂಕ್ತ ರೀತಿಯಲ್ಲಿ ಲಭ್ಯವಿಲ್ಲ.
Related Articles
Advertisement
ಹೈಟೆಕ್ ಮಾರುಕಟ್ಟೆ ನಿರ್ಮಾಣಈಗಿನ ಹಳೆ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣವಾಗಲಿದೆ. ಕಾಮಗಾರಿ ಆರಂಭವಾಗಿ ಎರಡು ವರ್ಷಗಳಲ್ಲಿ ಪೂರ್ಣವಾಗಲಿದೆ. ಸುಸಜ್ಜಿತ ರೀತಿಯಲ್ಲಿ ಮಾರುಕಟ್ಟೆ ರಚನೆ ಆದರೆ, ಮಾಲ್‌ಗಳಲ್ಲಿನ ಮಾರುಕಟ್ಟೆ ರೀತಿಯ ವಾತಾವರಣವಿರಲಿದೆ. ಮಾರಾಟಗಾರರಿಗೆ ಪ್ರತ್ಯೇಕ-ಪ್ರತ್ಯೇಕ ವ್ಯವಸ್ಥೆ, ಗ್ರಾನೈಟ್ ಅಳವಡಿಕೆ, ಒತ್ತಡ ಮುಕ್ತ, ಸ್ವತ್ಛತೆಗೆ ವಿಶೇಷ ಗಮನ ನೀಡಲಾಗುತ್ತದೆ. ಹೂ, ತರಕಾರಿ, ಮೀನು, ಮಾಂಸ ಸಹಿತ ವಿವಿಧ ಮಾರಾಟಗಾರರಿಗೆ ನಿಗದಿತ ವ್ಯವಸ್ಥೆಗಳು, ಆಕರ್ಷಕ ಹೊರಭಾಗ, ಪೂರ್ಣ ಮಟ್ಟದ ಶೌಚಾಲಯ, ಮಾರುಕಟ್ಟೆಗೆ ಆಕರ್ಷಣೀಯ ಸ್ಪರ್ಶ ಸಹಿತ ಹಲವಾರು ವಿಶೇಷತೆಗಳು ಹೈಟೆಕ್ ಮಾರುಕಟ್ಟೆಯಲ್ಲಿ ದೊರೆಯಲಿದೆ. ಹೊಸ ಮಾರುಕಟ್ಟೆ ನಿರ್ಮಾಣ
ಬಹುನಿರೀಕ್ಷೆಯ ಕಂಕನಾಡಿಯ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ನಡೆಸಲಾಗಿದೆ. ತಾತ್ಕಾಲಿಕ ಮಾರುಕಟ್ಟೆ ಸಿದ್ಧವಾಗಿದ್ದು, ಒಂದೆ ರಡು ದಿನದಲ್ಲಿ ಹಳೆ ಮಾರುಕಟ್ಟೆಯ ವ್ಯಾಪಾರಿ ಗಳು ಸ್ಥಳಾಂತರವಾಗಲಿ ದ್ದಾರೆ. ಬಳಿಕ ಹೊಸ ಮಾರುಕಟ್ಟೆ ಕಾಮ ಗಾರಿ ಆರಂಭವಾಗಲಿದೆ.
-ನವೀನ್‌ಡಿ’ಸೋಜಾ, ಮನಪಾ ಸದಸ್ಯ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಕ್ಕೆ ಸೂಚನೆ
ಕಂಕನಾಡಿಯಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಪೂರ್ಣ ವಾಗಿದೆ. ಹಳೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವವರು ತತ್‌ಕ್ಷಣವೇ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಅಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಳಿಕ ಹಳೆ ಮಾರುಕಟ್ಟೆ ಕೆಡವಿ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು ಮನಪಾ