Advertisement

ದಿಢೀರ್‌ ದಾಳಿ: ಪ್ಲಾಸ್ಟಿಕ್‌ ವಶ

03:26 PM Dec 10, 2019 | Team Udayavani |

ಗಜೇಂದ್ರಗಡ: ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟ ಸಂಪೂರ್ಣ ನಿಷೇಧಿಸಲು ಪಣತೊಟ್ಟಿರುವ ಗಜೇಂದ್ರಗಡ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡರು.

Advertisement

ಪಟ್ಟಣದ ಕುಷ್ಟಗಿ ರಸ್ತೆ ಬಳಿಯ ಶ್ರೀ ಶರಣಬಸವೇಶ್ವರ ಕಿರಾಣಿ ಸ್ಟೋರ್‌ ಮೇಲೆ ದಾಳಿ ನಡೆಸಿ 50 ಕೆಜಿ ಪ್ಲಾಸ್ಟಿಕ್‌ನ್ನು ವಶಕ್ಕೆ ಪಡೆದು 5 ಸಾವಿರ ರೂ. ದಂಡ ವಿಧಿಸಿದರು. ದುರ್ಗಾ ವೃತ್ತ, ಅಂಬೇಡ್ಕರ್‌ ವೃತ್ತ ಬಳಿಯ ಮಾಂಸದ ಅಂಗಡಿಗಳ ಮೇಲೆಯೂ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುವುದಲ್ಲದೇ 6 ಮಾಂಸದ ಅಂಗಡಿಗಳಿಗೆ ತಲಾ 500 ರೂ. ನಂತೆ ದಂಡ ವಿಧಿಸಿದರು. ಬಳಿಕ ಸಾರ್ವಜನಿಕರು ಪ್ಲಾಸ್ಟಿಕ್‌ ಚೀಲಗಳನ್ನು ಹಿಡಿದು ತೆರಳುತ್ತಿದ್ದ ಮೂವರಿಗೆ 100 ರೂ. ದಂಡ ಹೇರಲಾಯಿತು. ಪುರಸಭೆ ಆರೋಗ್ಯ ನಿರೀಕ್ಷಕ ರಾಘವೇಂದ್ರ ಮಂತಾ, ಶಿವಕುಮಾರ ಇಲ್ಲಾಳ, ಹನಮಂತ ಚಲವಾದಿ, ದುರುಗಪ್ಪ ಬಂಗಾಳಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next