Advertisement

ಫೇಸ್ ಬುಕ್ ಗೆಳೆಯ, ಸಹೋದರರು ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

09:26 AM Jan 04, 2019 | Sharanya Alva |

ಮುಜಾಫರ್ ನಗರ್: 23ವರ್ಷದ ಯುವತಿ ಮೇಲೆ ಫೇಸ್ ಬುಕ್ ಮೂಲಕ ಪರಿಚಯವಾದ ಯುವಕ ಮತ್ತು ಸಹೋದರರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಬಲವಂತವಾಗಿ ಮದುವೆಯಾಗಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

Advertisement

ಯುವತಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸೋನು ಎಂಬ ಯುವಕ ಫೇಸ್ ಬುಕ್ ಪರಿಚಯವಾಗಿದ್ದ. ಆತ ಯುವತಿಯನ್ನು ಹೋಟೆಲ್ ವೊಂದಕ್ಕೆ ಕರೆಯಿಸಿಕೊಂಡು ತನ್ನ ಸಹೋದರರ ಜತೆ ಸೇರಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ ಎಂದು ತಿಳಿಸಿದ್ದಾಳೆ. ಅಷ್ಟೇ ಅಲ್ಲ ಅತ್ಯಾಚಾರದ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ದೂರಿದ್ದಾಳೆ.

ಬ್ಲ್ಯಾಕ್ ಮೇಲ್ ಮಾಡಿ ತನ್ನ ಬಲವಂತವಾಗಿ ಮದುವೆಯಾಗಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಆಕೆ ನೀಡಿದ್ದ ದೂರಿನಂತೆ ಪೊಲೀಸರು ಸೋನು ಮತ್ತು ಆತನ ಕುಟುಂಬದ ಹತ್ತು ಮಂದಿ ಸದಸ್ಯರ ವಿರುದ್ಧ ಐಪಿಸಿ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ಶಾಮ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಂಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next