ಈ ಸಂಬಂಧ ಹೆಬ್ಟಾಳ ನಿವಾಸಿ 26 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೈದ್ರಾಬಾದ್ ಮೂಲದ ಸಂಗಮೇಶ್ ಪಾಟೀಲ್ ಎಂಬಾತನ ವಿರುದ್ಧ ಅಮೃತಹಳ್ಳಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Advertisement
ಸಂತ್ರಸ್ತೆ 2013ರಿಂದ ಕಿರುತೆರೆ ಕಲಾವಿದೆಯಾಗಿದ್ದು, ಈ ಸಂದರ್ಭದಲ್ಲಿ ಆರೋಪಿ ಕರೆ ಮಾಡಿ ಸಿನಿಮಾ ನಿರ್ಮಾಪಕ ಎಂದು ಪರಿಚಯಿಸಿಕೊಂಡು ಉತ್ತಮ ಅವಕಾಶ ಕೊಡುವುದಾಗಿ ನಂಬಿಸಿದ್ದಾನೆ. ಆರೋಪಿಯನ್ನು ಭೇಟಿಯಾದಾಗ ಅಸಭ್ಯವಾಗಿ ವರ್ತಿಸಿದ್ದಾನೆ. ಕೆಲ ದಿನಗಳ ನಂತರ ಮತ್ತೂಮ್ಮೆ ಕರೆ ಮಾಡಿ ಹೈದ್ರಾಬಾದ್‌ಗೆ ಬಂದರೆ ಸಿನಿಮಾವೊಂದರಲ್ಲಿ ನಾಯಕನಟಿ ಪಾತ್ರ ಕೊಡಿಸುವುದಾಗಿ ಹೇಳಿ ಕರೆಸಿಕೊಂಡು, ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನೇ ಸಮಾಧಾನಪಡಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.
2014ರಲ್ಲಿ ಕರೆ ಮಾಡಿದ ಸಂಗಮೇಶ್ ಪಾಟೀಲ್, ಈ ಕೂಡಲೇ ಗೋವಾಗೆ ಬರುವಂತೆ ಹೇಳಿದ್ದಾನೆ. ಸಂತ್ರಸ್ತೆ ನಿರಾಕರಿಸಿದಾಗ “ನಿನ್ನ ನಗ್ನ ವಿಡಿಯೋಗಳು ತನ್ನ ಬಳಿ ಇದ್ದು, ಅವುಗಳನ್ನು ಸಾಮಾಜಿಕ ಜಾಲತಾಲಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಹೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ಆಕೆ, ಗೋವಾಕ್ಕೆ ಹೋದಾಗ ಅಲ್ಲಿಯೂ ದೌರ್ಜನ್ಯ ಎಸಗಿದ್ದಾನೆ. ಅನಂತರ ಮುಂಬೈನಲ್ಲಿ ಹೀಗೆ ಐದಾರು ಬಾರಿ ಸಂತ್ರಸ್ತೆ ಮೇಲೆ ನಿರಂತರ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಆಕೆಯ ಮನೆಗೆ ಬಂದು ಹೋಗುತ್ತಿದ್ದು, ಪ್ರತ್ಯೇಕ ಮನೆ ಮಾಡುವಂತೆ ಸೂಚಿಸಿದ್ದ. ಈ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳುವಂತೆ ಸಂತ್ರಸ್ತೆ ಕೇಳಿಕೊಂಡಾಗ ಒಪ್ಪಿಕೊಂಡಿದ್ದ. ಆದರೆ, ಆರೋಪಿ ಹಿನ್ನೆಲೆ ಪರಿಶೀಲಿಸಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿರುವುದು ಗೊತ್ತಾಗಿದೆ. ಈ ವಿಚಾರ ಪ್ರಶ್ನಿಸಿದ ಸಂತ್ರಸ್ತೆಗೆ ಆರೋಪಿ, ಸುಪಾರಿ ಕೊಟ್ಟು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡ ಆರೋಪಿಯ ಪತ್ನಿ, ಸಂತ್ರಸ್ತೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಹೈದ್ರಾಬಾದ್‌ಗೆ ಕರೆಸಿಕೊಂಡು, ಆಕೆಯ ವಿರುದ್ಧವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಳು ಎಂದು ಸಂತಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
Related Articles
Advertisement