ಮಂಗಳೂರು: ಆಸ್ಪತ್ರೆಯಲ್ಲಿ ಭಿನ್ನ ಸಾಮರ್ಥ್ಯದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಮುಂಬಯಿಯ ವ್ಯಕ್ತಿ ಮತ್ತು ಸಹಕರಿಸಿದ ಮಹಿಳೆಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿಹಾರ ಮೂಲದ, ಮುಂಬಯಿಯಲ್ಲಿ ವಾಸವಿರುವ ಅಬ್ದುಲ್ ಹಲೀಂ (37) ಮತ್ತು ಕುಲಶೇಖರದ ಶಮೀನಾ ಬಾನು (22) ಬಂಧಿತ ಆರೋಪಿಗಳು.
ದೂರುದಾರ ಮಹಿಳೆಯ ತಮ್ಮ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಮತ್ತು ಆತನ ಪರಿಚಯದ ಬಿಹಾರ ಮೂಲದ ಮುಂಬಯಿಯಲ್ಲಿ ವಾಸವಿರುವ ಅಬ್ದುಲ್ ಹಲೀಂ ಆ. 10 ತಮ್ಮ ಬೈಕ್‌ನಲ್ಲಿ ಕಾಸರಗೋಡಿಗೆ ಹೋಗಿ ವಾಪಸು ಬರುತ್ತಿದ್ದಾಗ ಮಂಜೇಶ್ವರ ಹೊಸಂಗಡಿ ಮಧ್ಯೆ ಬೈಕ್ ಅಪಘಾತವಾಗಿದೆ. ಘಟನೆಯಲ್ಲಿ ಇಬ್ಬರೂ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಬ್ಬರು ಗಾಯಾಳು ಆಸ್ಪತ್ರೆಯ ಒಂದೇ ರೂಮ್ ನಲ್ಲಿ ಮಧ್ಯ ಸ್ಕ್ರೀನ್ ಹಾಕಿಸಿ ಚಿಕಿತ್ಸೆ ಪಡೆಯುತ್ತಿದ್ದರು.
ದೂರುದಾರರು ಮತ್ತು ಅವರ ದೊಡ್ಡ ಮಗಳು ಅಪಘಾತದ ಬಗ್ಗೆ ವಿಚಾರಿಸಲು ಮಂಜೇಶ್ವರ ಠಾಣೆಗೆ ಹೋಗಿದ್ದರು. ಆ ವೇಳೆ ಅವರ ತಮ್ಮನ ಹೆಂಡತಿ ಶಮೀನಾ ಬಾನು ಜತೆ ತಮ್ಮ ವಿಶೇಷ ಭಿನ್ನ ಸಾಮಾರ್ಥಯದ ಮಗಳನ್ನು ಬಿಟ್ಟು ಹೋಗಿದ್ದರು.
ಶಮೀನಾ ಬಾನು ಆರೋಪಿತನಾದ ಅಬ್ದುಲ್ ಹಲೀಂ ಜತೆ ಆಸ್ಪತ್ರೆಯಲ್ಲಿ ಆನೈತಿಕವಾಗಿ ವರ್ತಿಸುತ್ತಿದ್ದುದನ್ನು ಅಪ್ರಾಪ್ತ ವಯಸ್ಕ ಹುಡುಗಿ ನೋಡಿದ್ದಳು. ಇದನ್ನು ಗಮನಿಸಿದ ಶಮೀನಾ ಬಾನು ಆಕೆಯನ್ನು ಕರೆದು ಬೆಡ್ ಮೇಲೆ ಕುಳ್ಳಿರಿಸಿದ್ದಳು. ಆಗ ಆಲ್ಲಿದ್ದ ಆರೋಪಿ ಅಬ್ದುಲ್ ಹಲೀಂ ಹುಡುಗಿಯ ಮೈಗೆ, ಎದೆಗೆ ಕೈ ಹಾಕಿದಾಗ ಆಕೆ ವಿರೋಧಿಸಿದ್ದಳು. ಬಳಿಕ ಶಮೀನಾಳ ಸಹಕಾರದಿಂದ ಅರೋಪಿತ ಅಬ್ದುಲ್ ಹಲೀಂ ಆಕೆಗೆ ಅತ್ಯಾಚಾರ ಮಾಡಿದ್ದ ಎಂದು ಬಾಲಕಿಯ ತಾಯಿ ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನ್ಯಾಯಾಂಗ ಬಂಧನ
ಕಲಂ 376, 109 ಐ.ಪಿ.ಸಿ , ಕಲಂ: 5 (ಏ), 5 (1), 6, 17 ಪೋಕ್ಸೊ ಕಾಯಿದೆಯಂತೆ ಕೇಸು ದಾಖಲಾದೆ. ಪ್ರಕರಣದಲ್ಲಿ ಆರೋಪಿತೆಯಾಗಿದ್ದ ಶಮೀನಾ ಬಾನುವನ್ನು ಆ. 16ರಂದೇ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಅಬ್ದುಲ್ ಹಲೀಂ ಆ. 16ರಂದು ರಂದು ಮಂಗಳೂರಿನಿಂದ ಮುಂಬ ಯಿಗೆ ಪ್ರಯಾಣಿಸುತ್ತಿದ್ದ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ನಿರೀಕ್ಷಕರು ಮತ್ತು ಸಿಬಂದಿ ಖಚಿತ ಮಾಹಿತಿ ಪಡೆದು ಗೋವಾದ ಮಡಗಾಂವ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಬಂಧಿಸಿದ್ದಾರೆ. ಗುರುವಾರ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ತನಿಖೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ. ಅವರು ನಡೆಸುತ್ತಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ನಿಗಾ ವಹಿಸಿ: ಕಮಿಷನರ್ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಹಾಗೂ ವಿಶೇಷ ಭಿನ್ನ ಸಾಮರ್ಥಯದ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಹೆಣ್ಣುಮಕ್ಕಳನ್ನು ಸಂಬಂಧಿಕರ ಜತೆಯಲ್ಲಿ ಕಳುಹಿಸುವಾಗ ಹೆಚ್ಚು ನಿಗಾ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.