Advertisement

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

10:21 PM May 14, 2024 | Team Udayavani |

ಹಾಸನ: ಅತ್ಯಾಚಾರ ಆರೋಪದಡಿ ಬಂಧಿತರಾಗಿರುವ ವಕೀಲ ಹಾಗೂ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಪೊಲೀಸರು ಮಂಗಳವಾರ 3 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡರು.

Advertisement

ಹೊಳೆನರಸೀಪುರ ಡಿವೈಎಸ್‌ಪಿ ಅಶೋಕ್‌ ಹಾಗೂ ತಂಡ ಹಾಸನ ಜಿಲ್ಲಾ ಕಾರಾಗೃಹಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿ ದೇವರಾಜೇಗೌಡ ಅವರನ್ನು ವಶಕ್ಕೆ ತೆಗೆದುಕೊಂಡಿತು. ಜೈಲಿನಿಂದ ಹೊರ ಬಂದ ದೇವರಾಜೇಗೌಡ ಸುದ್ದಿಗಾರರನ್ನು ಕಂಡು “ಅವರ ಪ್ರಕ್ರಿಯೆಗಳನ್ನು ಅವರು ಮಾಡ್ತಾರೆ ಬಿಡ್ರಪ್ಪ’ ಎಂದಷ್ಟೇ ಹೇಳಿದರು. ಅಷ್ಟರಲ್ಲಿ ಪೊಲೀಸರು ಅವರನ್ನು ವಾಹನಕ್ಕೆ ಹತ್ತಿಸಿಕೊಂಡು ಹೊರಟರು.

ಮಂಗಳವಾರದಿಂದ 3 ದಿನ ದೇವರಾಜೇಗೌಡ ಅವರು ಪೊಲೀಸರ ವಿಚಾರಣೆಗೆ ಒಳಪಡಲಿದ್ದಾರೆ. ಶನಿವಾರ ಸಂಜೆ ನ್ಯಾಯಾಂಗ ಬಂಧನಕ್ಕೊಳಗಾದ ದೇವರಾಜೇಗೌಡ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಹೊಳೆನರಸೀಪುರ ಕೋರ್ಟ್‌ಗೆ ಪೊಲೀಸರು ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next