ಮಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿ ಕುಖ್ಯಾತ ಕ್ರಿಮಿನಲ್, ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹುಲಿ ವೇಷ ತರಬೇತಿ ಪಡೆಯಲು ಬಂದಿದ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಪುಸಲಾಯಿಸಿ ಹೊಸ ವರ್ಷಾಚರಣೆ ಪಾರ್ಟಿಗೆ ಕರೆದೊಯ್ದು ಮೂರು ದಿನ ಕಾಲ ಲಾಡ್ಜ್ನಲ್ಲಿರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ತಲೆಮರೆಸಿದ್ದ ಆರೋಪ ಕೂಡ ಈತನ ಮೇಲಿದೆ.
2018ರ ಡಿಸೆಂಬರ್‌ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈತ ಹುಲಿ ವೇಷ ತರಗತಿ ನಡೆಸುತ್ತಿದ್ದ. ನಗರದ ಹಲವು ಮಂದಿ ಹುಲಿ ವೇಷ ನೃತ್ಯಾಭ್ಯಾಸ ಕಲಿಯಲು ಬರುತ್ತಿದ್ದರು. ಈ ಪೈಕಿ ಅಪ್ರಾಪ್ತ ವಯಸ್ಸಿನ ಯುವತಿಯ ಮೊಬೈಲ್ ನಂಬರ್ ಪಡೆದು ಆಕೆಯ ಜತೆ ಸ್ನೇಹ ಸಂಪಾದಿಸಿದ್ದ. ಡಿ. 31ರಂದು ಹೊಸ ವರ್ಷಾಚರಣೆ ಪಾರ್ಟಿಗೆಂದು ಪುಸಲಾಯಿಸಿ ಆಕೆಯನ್ನು ಮಣಿಪಾಲಕ್ಕೆ ಕರೆದೊಯ್ದಿದ್ದ. ಅಲ್ಲಿ ಪಬ್‌ನಲ್ಲಿ ಬಲವಂತವಾಗಿ ಮದ್ಯ ಕುಡಿಸಿದ್ದ. ಬಳಿಕ ಸ್ನೇಹಿತರ ಸಹಕಾರದಲ್ಲಿ ಆಕೆಯನ್ನು ಮೂರು ದಿನಗಳ ಕಾಲ ಲಾಡ್ಜ್ನಲ್ಲಿರಿಸಿ ನಿರಂತರ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಇದರಿಂದ ಅಸ್ವಸ್ಥಳಾದ ಬಾಲಕಿಯನ್ನು ಸಹಚರರ ಮೂಲಕ ವೆನಾÉಕ್ ಆಸ್ಪತ್ರೆಗೆ ದಾಖಲಿಸಿದ್ದ. ಜ.6ರಂದು ಆಕೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಶರಣ್ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಶರಣ್ ತಲೆಮರೆಸಿಕೊಂಡಿದ್ದ ಹಾಗೂ ಇಬ್ಬರು ಬಂಧಿತರಾಗಿದ್ದರು.
ಆಕಾಶಭವನ್ ಶರಣ್ ವಿರುದ್ಧ ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ| ರಾಮಕೃಷ್ಣ ಕೊಲೆ ಪ್ರಕರಣ ಸಹಿ ತ ಮೂರು ಕೊಲೆ, ಒಂದು ಕೊಲೆ ಯತ್ನ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರಗೈದು ದರೋಡೆ ನಡೆಸಿದ ಪ್ರಕರಣ ಸಹಿ ತ 18ಕ್ಕೂ ಅಧಿಕ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಕೂಡ ಆತನ ಮೇಲೆ ಕೇಸು ಇದೆ.
ಆತ ನಿಗೆ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಆತನ ಸಹಚರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.