Advertisement

ರೇಪ್‌ ಆರೋಪಿಗೆ ಬೇಲ್‌; ಭವ್ಯ ಮೆರವಣಿಗೆಯಲ್ಲಿ ಸ್ವಾಗತ!!

11:24 AM Sep 15, 2017 | Team Udayavani |

ಧಾರವಾಡ : ರಾಜಕಾರಣಿಗಳು, ಸಿನಿಮಾ ನಟರ ರೋಡ್‌ ಶೋಗಳನ್ನು ನೋಡಿದ್ದೀರಿ. ಆದರೆ ಧಾರವಾಡದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದಾಗ ಭವ್ಯ ರೋಡ್‌ ಶೋ ಮಾಡಿ ಸ್ವಾಗತ ಮಾಡಿರುವ ನಾಚಿಕೆಗೇಡಿನ ಘಟನೆ ಗುರುವಾರ ನಡೆದಿದೆ.

Advertisement

2 ತಿಂಗಳ ಹಿಂದೆ ಹುಬ್ಬಳ್ಳಿಯ ಲಾಡ್ಜ್ ವೊಂದರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲು ಪಾಲಾಗಿದ್ದ ಮುಕ್ತುಂ ಸೊಗಲದ ಎಂಬಾತನಿಗೆ ಧಾರವಾಡ ನ್ಯಾಯಾಲಯ ಜಾಮೀನು ನೀಡಿತ್ತು.

ಜಾಮೀನು ಸಿಕ್ಕ ಕೂಡಲೇ ಹಾರ, ತುರಾಯಿಗಳೊಂದಿಗೆ ನ್ಯಾಯಾಲಯದ ಬಳಿ ಜಮಾಯಿಸಿದ ನೂರಾರು ಬೆಂಬಲಿಗರು ಯುದ್ಧ ಗೆದ್ದ ಮಾದರಿಯಲ್ಲಿ ಕೇಕೆ ಹಾಕುತ್ತಾ ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್‌ ಮತ್ತು ಕಾರುಗಳ ಮೆರವಣಿಗೆ ಮಾಡಿ  ಮನೆಗೆ ಕರೆದುಕೊಂಡು ಹೋಗಿದ್ದಾರೆ. 

ಸುಮಾರು 500 ಬೈಕ್‌ಗಳು ಮತ್ತು 20 ಕ್ಕೂ ಹೆಚ್ಚು ಕಾರುಗಳು, ಆಟೋಗಳಲ್ಲಿ ಬಂದ ಬೆಂಬಲಿಗರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. 

ಮೆರವಣಿಗೆ ವೇಳೆ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗಿದ್ದು ಆರೋಪಿಯೊಬ್ಬನಿಗೆ ಈ ಪರಿಯ ಮೆರವಣಿಗೆ ಬೇಕಿತ್ತೆ ಎಂದು ಆಕ್ರೋಶ ಹೊರ ಹಾಕಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

Advertisement

ಮುಕ್ತುಂ ಈ ಹಿಂದೆ ಜೆಡಿಎಸ್‌ ಮುಖಂಡನಾಗಿದ್ದು ಆರೋಪ ಬಂದ ತಕ್ಷಣ ಆತನನ್ನು ಉಚ್ಛಾಟನೆ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next