Advertisement
ಅತ್ಯಾಚಾರ ಸಂಬಂಧ ಜುಹು ಪೊಲೀಸ್ ಠಾಣೆಯಲ್ಲಿ ಜು. 30 ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಶೋಧ ಕಾರ್ಯ ನಡೆಸಿದ ಪೊಲೀಸ್ ಅಧಿಕಾರಿ ದಯಾ ನಾಯಕ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಸೂರತ್ ಚುಫೆ ಭುಲ್ ಯಾನೆ, ಸಂದೀಪ್ ಕಲು ಸಿಂಗ್ ಭುಲ್ (30) ಎಂದು ಗುರುತಿಸಲಾಗಿದೆ. ನೇಪಾಳಕ್ಕೆ ಪರಾರಿಯಾಗಲು ಆರೋಪಿ ಯೋಜಿ ಸಿದ್ದು, ಆತನನ್ನು ಉತ್ತರಾಖಂಡದ ಪೌಡಿ ಗದ್ವಾಲ್‌ನಲ್ಲಿ ಬಂಧಿಸಲಾಗಿದೆ.
ಇಲ್ಲಿನ ಬಾಂದ್ರಾ ಪರಿಸರದ ಅಂಗಡಿಗೆ ನುಗ್ಗಿ ಮಹಿಳಾ ಉದ್ಯೋಗಿಯನ್ನು ಬೆದರಿಸಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿ ಸುವಲ್ಲಿ ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್‌ನ ಯೂನಿಟ್ 9ರ ತಂಡವು ಯಶಸ್ವಿಯಾಗಿದೆ. ಆರೋಪಿ ರಿಯಾಜ್ ಅಹ್ಮದ್ ಅಬ್ದುಲ್ ಗನಿ ವಾರ್ (29). ಆರೋಪಿ ಬಾಂದ್ರಾ ರೈಲು ನಿಲ್ದಾಣ (ಪಶ್ಚಿಮ)ಕ್ಕೆ ಬರುತ್ತಿ¨ªಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು.