ಮುಂಬಯಿ: ಬಾಲಿವುಡ್ ನಟ ರಣ್ವೀರ್ ಸಿಂಗ್ ವೃತ್ತಿ ಬದುಕಿನಲ್ಲಿ ಅವರು ಮ್ಯಾಗ್ ಜಿನ್ ಗಾಗಿ ಮಾಡಿಸಿದ ಬೆತ್ತಲೆ ಫೋಟೋ ಶೂಟ್ ವೊಂದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಇದೀಗ ಈ ಫೋಟೋ ಮತ್ತೆ ಕಾಣಿಸಿಕೊಂಡಿದೆ.
2022 ರಲ್ಲಿ, ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮ್ಯಾಗ್ ಜಿನ್ ವೊಂದಕ್ಕೆ ಫೋಟೋ ಶೂಟ್ ಮಾಡಿಸಿದ್ದರು. ಈ ಫೋಟೋದಲ್ಲಿ ಅವರು ಬರೀ ಮೈಯಲ್ಲಿ ಕಾಣಿಸಕೊಂಡಿದ್ದರು. ಇದೇ ಕಾರಣದಿಂದ ʼಗಲ್ಲಿ ಬಾಯ್ʼ ವಿವಾದಕ್ಕೆ ಸಿಲುಕಿದ್ದರು. ಎಲ್ಲಿಯವರೆಗೆ ಅಂದರೆ ಈ ಫೋಟೋದಿಂದಾಗಿ ರಣವೀರ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಮತ್ತೆ ರಣವೀರ್ ಸಿಂಗ್ ನಗ್ನ ಫೋಟೋ ಹಾಡೊಂದರಲ್ಲಿ ಕಾಣಿಸಿಕೊಂಡಿದೆ. ಅಮೆರಿಕಾದ ಖ್ಯಾತ ಗಾಯಕರಾಗಿರುವ ಸುಫ್ಜಾನ್ ಸ್ಟೀವನ್ಸ್ ಅವರು ಇತ್ತೀಚೆಗೆ “ಜಾವೆಲಿನ್” ಎನ್ನುವ ಆಲ್ಬಂನ್ನು ರಿಲೀಸ್ ಮಾಡಿದ್ದಾರೆ. ಈ ಆಲ್ಬಂನ ಒಂದು ಹಾಡಿನಲ್ಲಿ ರಣವೀರ್ ಸಿಂಗ್ ಅವರ ನಗ್ನ ಫೋಟೋವನ್ನು ಗಾಯಕ ಬಳಸಿಕೊಂಡಿದ್ದಾರೆ.
ಜುಲೈ 2022 ರಂದು ರಣವೀರ್ ಸಿಂಗ್ ಅವರು ತನ್ನ ನಗ್ನ ಫೋಟೋಶೂಟ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜೊತೆ ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ರಣವೀರ್ ವಿರುದ್ಧ ಎನ್ ಜಿಒ ಕಾರ್ಯಕರ್ತರೊಬ್ಬರು ಎಫ್ ಐಆರ್ ದಾಖಲಿಸಿದ್ದರು.