Advertisement

ಐಪಿಎಲ್‌ ಉದ್ಘಾಟನೆಯಲ್ಲಿರಲಿದೆ ಬಾಲಿವುಡ್‌ ರಂಗು

06:25 AM Mar 25, 2018 | Team Udayavani |

ಮುಂಬಯಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿ ಉದ್ಘಾಟನೆಗೆ ಮುಂಬಯಿಯ ವಾಂಖೇಡೆ ಕ್ರೀಡಾಂಗಣ ಸಜ್ಜಾಗುತ್ತಿದೆ. ಈ ಸಲ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌.ಧೋನಿ, ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ ಉದ್ಘಾಟನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Advertisement

ಉಳಿದ ನಾಯಕರೆಲ್ಲ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಬಿಸಿಸಿಐ ಮುಂಚಿತವಾಗಿಯೇ ತಿಳಿಸಿದೆ. 

ಕ್ರಿಕೆಟಿಗರ ಗೈರು ಹಾಜರಾತಿ ಇದ್ದರೂ ಬಾಲಿವುಡ್‌ನ‌ ಖ್ಯಾತ ನಟರಾದ ರಣವೀರ್‌ ಸಿಂಗ್‌, ಪರಿಣಿತಿ ಚೋಪ್ರಾ ಸೇರಿದಂತೆ ಹಲವಾರು ನಟ-ನಟಿಯರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next