ಮುಂಬೈ: ಇತ್ತೀಚೆಗೆ ಒಂದು ವೈರಲ್ ವಿಡಿಯೋದಿಂದಾಗಿ ಪ್ರಸಿದ್ದಿಯಾದ ರಾನು ಮೊಂಡಾಲ್ ಪದೇ ಪದೇ ಸುದ್ದಿಯಾಗುತ್ತಿದ್ಧಾರೆ. ಮೊನ್ನೆ ಮೊನ್ನೆಯಷ್ಟೇ ರಾನು ಮೇಕಪ್ ಮಾಡಿದ್ಧ ಫೋಟೋ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ರಾನುನ ಮತ್ತೊಂದು ವಿಡಿಯೋ ಈಗ ಸಖತ್ ಸುದ್ದಿ ಮಾಡುತ್ತಿದೆ.
ಉತ್ತರ ಪ್ರದೇಶದ ಖಾನ್ ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾನು ಭಾರಿ ಮೇಕಪ್ ಮಾಡಿಕೊಂಡು ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ದಾರೆ.
ಡಿಸೈನರ್ ಜೊತೆ ರಾನು ಮೊಂಡಾಲ್ ವಾಕ್ ಮಾಡಿದ್ದು, ‘ಫ್ಯಾಶನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾನು ಮತ್ತೊಮ್ಮೆ ಚರ್ಚೆಯ ವಿಷಯವಾಗಿದ್ದಾರೆ.