Advertisement

ವಿಜೆ ರಣ್‌ ವಿಜಯ್‌ ಸಿಂಗ್‌ –ಪ್ರಿಯಾಂಕಾಗೆ ಹೆಣ್ಣು ಮಗು ಜನನ

12:22 PM Jan 17, 2017 | udayavani editorial |

ಮುಂಬಯಿ : ಪ್ರಖ್ಯಾತ ರಿಯಾಲಿಟಿ ಟಿವಿ ಸ್ಟಾರ್‌ ವಿಜೆ ರಣ್‌ ವಿಜಯ್‌ ಸಿಂಗ್‌ ಮತ್ತು ಪತ್ನಿ ಪ್ರಿಯಾಂಕಾಗೆ ಮೊದಲ ಹೆಣ್ಣು ಮಗು ಜನಿಸಿದೆ.

Advertisement

“ರೋಡೀಸ್‌’ ಸ್ಟಾರ್‌ ಆಗಿ ಖ್ಯಾತಿವೆತ್ತಿರುವ ರಣ್‌ ವಿಜಯ್‌ ಸಿಂಗ್‌ ಅವರು ತಾನು “ಪುಟಾಣಿ ರಾಜಕುಮಾರಿ’ಯ ಅಪ್ಪನಾಗಿರುವ ವಿಷಯವನ್ನು ಟ್ವಿಟರ್‌ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿ ಸಂಭ್ರಮಿಸಿದ್ದಾರೆ.

“ದೇವರ ಅನುಗ್ರಹದಿಂದ, ಕುಟುಂಬದವರು, ಸ್ನೇಹಿತರು ಮತ್ತು ಹಿತೈಷಿಗಳ ಶುಭಾಕಾಂಕ್ಷೆಯ ಫ‌ಲವಾಗಿ ಪ್ರಿಯಾಂಕಾ ಮತ್ತು ನನಗೆ “ಪುಟಾಣಿ ರಾಜಕುಮಾರಿ’ ಜನಿಸಿದ್ದಾಳೆ’ ಎಂದು ರಣ್‌ ವಿಜಯ್‌ ಸಿಂಗ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ವಿಜೆ ರಣ್‌ ವಿಜಯ್‌ ಸಿಂಗ್‌ 2014ರ ಎಪ್ರಿಲ್‌ 14ರಂದು ಕೀನ್ಯದ ಮೊಂಬಾಸಾದಲ್ಲಿ ಲಂಡನ್‌ನಲ್ಲಿ ನೆಲೆಗೊಂಡಿದ್ದ ತನ್ನ ಮನದನ್ನೆಯನ್ನು ವಿವಾಹವಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next