Advertisement

ಸ್ಕೇಟಿಂಗ್‌ ಸುತ್ತ ರಂಕಲ್‌ ರಾಟೆ

11:34 AM Feb 23, 2018 | |

“ಜೀವನದಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತದೆ … ಹೀಗೊಂದು ಸಂದೇಶ ಹೊಂದಿರುವ ಚಿತ್ರ “ರಂಕಲ್‌ ರಾಟೆ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಸಂದೇಶವನ್ನು ಕ್ರೀಡೆಯ ಹಿನ್ನೆಲೆಯಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಗೋಪಿ ಕೆರೂರ್‌. ಸ್ಕೇಟಿಂಗ್‌ ಹಿನ್ನೆಲೆಯನ್ನಿಟ್ಟುಕೊಂಡು ಗೋಪಿಯರು “ರಂಕಲ್‌ ರಾಟೆ’ ಸಿನಿಮಾ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಗೋಪಿ, “ಎಲ್ಲಾ ಗೇಮ್‌ಗಳನ್ನು ತಲೆ ಎತ್ತಿ, ಎದೆಯುಬ್ಬಿಸಿ ಆಡಬೇಕು. ಆದರೆ, ಸ್ಕೇಟಿಂಗ್‌ ಮಾತ್ರ ಅದಕ್ಕೆ ಸಂಪೂರ್ಣ ಉಲ್ಟಾ. ಇಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ಇರಬೇಕು. ಜೀವನದಲ್ಲೂ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತದೆ. ಪ್ರತಿಭೆಗೆ ಶ್ರೀಮಂತ, ಬಡವ ಎಂಬುದನ್ನು ನೋಡಿಕೊಂಡು ಬರೋದಿಲ್ಲ’ ಎಂಬುದು ನಿರ್ದೇಶಕ ಗೋಪಿ ಮಾತು.

ಚಿತ್ರವನ್ನು ಬೈಸಾನಿ ಸತೀಶ್‌ ಕುಮಾರ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮನು ಅದ್ವಿಕ್‌ ನಾಯಕರಾಗಿ ನಟಿಸಿದ್ದಾರೆ. ಅವರಿಲ್ಲಿ ಸ್ಕೇಟಿಂಗ್‌ ಕೋಚ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡು ಖುಷಿಯಾದರು ಅದ್ವಿಕ್‌. ಕೃಷ್ಣಮೂರ್ತಿ ಕವತ್ತಾರು ಕೂಡಾ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಚಿತ್ರದ ವಿತರಣೆಯನ್ನು ನವರಸನ್‌ ಮಾಡುತ್ತಿದ್ದು, 65 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರಂತೆ. ಬಹುತೇಕ ಚಿತ್ರಮಂದಿರಗಳಲ್ಲಿ ಶೇಕಡವಾರು ಮಾತನಾಡಿದ್ದರಿಂದ ನಿರ್ಮಾಪಕರಿಗೆ ಬಿಡುಗಡೆಯ ಕಷ್ಟ ಕಡಿಮೆಯಾಗಲಿದೆ ಎಂಬುದು ನವರಸನ್‌ ಮಾತು. ಚಿತ್ರಕ್ಕೆ ಅವಿನಾಶ್‌ ಶ್ರೀರಾಮ್‌ ಸಂಗೀತ, ಪ್ರವೀಣ್‌ ಛಾಯಾಗ್ರಹಣ, ಕೆ.ಜೆ.ವೆಂಕಟೇಶ್‌ ಸಂಕಲನವಿದೆ. 

Advertisement

Udayavani is now on Telegram. Click here to join our channel and stay updated with the latest news.

Next