Advertisement

ನಾಯಕಿ ಜೊತೆಗೆ ಗಾಯಕಿ

04:41 PM Jun 22, 2017 | |

“ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್‌ ಅವರು ಹಿರಿತೆರೆಗೆ ಜಂಪ್‌ ಮಾಡಿದ್ದು, “ರಾಜ-ಹಂಸ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಬಹಳಷ್ಟು ಜನರಿಗೆ ಗೊತ್ತಿರದ ಒಂದು ವಿಷಯವೆಂದರೆ, ರಂಜಿನಿ ಈ ಚಿತ್ರದಲ್ಲಿ ಬರೀ ನಾಯಕಿಯಾಗಷ್ಟೇ ಎಂಟ್ರಿ ಕೊಡುತ್ತಿಲ್ಲ, ಗಾಯಕಿಯಾಗಿಯೂ ಎಂಟ್ರಿ ಕೊಡುತ್ತಿದ್ದಾರೆ.

Advertisement

“ರಾಜ-ಹಂಸ’ ಚಿತ್ರಕ್ಕೆ ರಂಜಿನಿ ರಾಘವನ್‌, ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್‌ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರದ ಹಾಡುಗಳು ಸೋಮವಾರ ಸಂಜೆ ಬಿಡುಗಡೆಯಾಗಿದ್ದೂ ಆಗಿದೆ. ನಟ ಅಜೇಯ್‌ ರಾವ್‌, ಬಿ.ಸಿ. ಪಾಟೀಲ್‌, ಯಮುನಾ ಮುಂತಾದವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

“ಒಂದೇ ಚಿತ್ರದಲ್ಲಿ ನಾಯಕಿಯಾಗಿ ಮತ್ತು ಗಾಯಕಿಯಾಗಿ ಡೆಬ್ಯು ಮಾಡುತ್ತಿದ್ದೇನೆ.ಮುಂಚೆ ಒಂದು ಬಿಟ್‌ ಹಾಡಿದ್ದೆ. ಅದನ್ನು ಕೇಳಿ ಇಷ್ಟವಾಗಿ, ಜೋಶ್ವಾ ಶ್ರೀಧರ್‌ ಅವರು ಒಂದು ಹಾಡನ್ನು ಹಾಡಿಸಿದ್ದಾರೆ. ಅವರಿಗೆ ನಾನು ದೊಡ್ಡ ಥ್ಯಾಂಕ್ಸ್‌ ಹೇಳಬೇಕು. ಏಕೆಂದರೆ, ದೊಡ್ಡದೊಡ್ಡ ಗಾಯಕರ ಮಧ್ಯೆ, ನನಗೂ ಹಾಡುವುದಕ್ಕೆ ಅವಕಾಧ ಕೊಟ್ಟಿದ್ದಾರೆ. ಒಂದೇ ಚಿತ್ರದಲ್ಲಿ ನಟನೆ ಮಾಡುವುದರ ಜೊತೆಗೆ ಹಾಡುವುದಕ್ಕೆ ಅವಕಾಶ ಸಿಕ್ಕಿರುವುದು ಬಹಳ ಸಂತೋಷವಾಗಿದೆ’ ಎಂದು ರಂಜಿನಿ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next